ಎರ್ಮಾಳ್ : ನಿಯಂತ್ರಣ ತಪ್ಪಿದ ಟಿಪ್ಪರ್ ರಸ್ತೆ ವಿಭಾಜಕಕ್ಕೆ ಢಿಕ್ಕಿ
ಕಾಂಜರಕಟ್ಟೆಯಿಂದ ಜಲ್ಲಿಕಲ್ಲು ಹೇರಿಕೊಂಡು ಉಡುಪಿ ಕಡೆಗೆ ಹೋಗುತ್ತಿದ್ದ ಟಿಪ್ಪರೊಂದು ಬಡ ಎರ್ಮಾಳು ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ತಡೆಬೇಲಿಗಳನ್ನು ತುಂಡರಿಸಿಕೊಂಡು ಸಾಗಿ ಮಧ್ಯದಲ್ಲೇ ಸಿಲುಕಿಕೊಂಡಿದೆ.
ಯಾವುದೋ ವಾಹನವೊಂದು ಅಡ್ಡ ಬಂದ ಕಾರಣ ಈ ಅಪಘಾತ ಸಂಭವಿಸಿದೆ ಎನ್ನುತ್ತಾರೆ ಟಿಪ್ಪರ್ ಚಾಲಕ, ಅದೃಷ್ಟವಶಾತ್ ಯಾವುದೇ ವಾಹನಗಳಾಗಲೀ ಪಾದಚಾರಿಗಳಾಗಲೀ ಆ ಭಾಗದಲ್ಲಿ ಸಂಚರಿಸದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಜಲ್ಲಿಕಲ್ಲುಗಳು ಹೆದ್ದಾರಿ ಎಲ್ಲೆಡೆ ಹರಡಿದ್ದರ ಪರಿಣಾಮ, ಹೆದ್ದಾರಿ ಒಂದು ಪಾಶ್ವವನ್ನು ಗಂಟೆಗೂ ಅಧಿಕ ಸಮಯ ಮುಚ್ಚಿ, ಉಡುಪಿ ಕಡೆಯಿಂದ ಬರುವ ವಾಹನಗಳಿಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.
ಈ ಪ್ರದೇಶದಲ್ಲಿ ಹೆದ್ದಾರಿಗಂಟಿಕೊಂಡೇ ಬೃಹತ್ ವಾಹನಗಳು ಪಾರ್ಕ್ ಮಾಡುವುದರಿಂದ ಈ ಡೈವರ್ಷನ್ ಭಾಗ ಅಪಘಾತ ವಲಯವಾಗಿ ರೂಪುಗೊಳ್ಳುತ್ತಿದೆ ಎಂಬುದಾಗಿ ಘಟನಾ ಸ್ಥಳದಲ್ಲಿ ಸಾರ್ವಜನಿಕರು ಆತಂಕ ವ್ಯಕ್ತ ಪಡಿಸಿದ್ದಾರೆ.