ಬಾಲಕಿ ಸಾವಿನ ಬೆನ್ನಲ್ಲೆ ಹೆದ್ದಾರಿ ದುರಾವಸ್ಥೆಗೆ ಮತ್ತೊಂದು ಬಲಿ

ಕಾಪುವಿನಲ್ಲಿ ಹೆದ್ದಾರಿ ದುರವಸ್ಥೆಗೆ ಬಾಲಕಿ ಬಲಿಯಾದ ಸ್ಥಳದಲ್ಲೇ ಮತ್ತೊರ್ವ ಯುವಕ ಬಲಿಯಾಗುವ ಮೂಲಕ ಹೆದ್ದಾರಿ ಪ್ರಯಾಣ ಕಠಿಣವಾಗುತ್ತಿದೆ.
ಬಾಲಕಿ ಸಾವಿನ ಕಹಿ ನೆನಪು ಮಾಸುವ ಮೊದಲೇ ಅದೇ ಸ್ಥಳದಲ್ಲಿ ಆಂಬುಲೆನ್ಸ್ ಇನೋವ ಕಾರು ಬೈಕ್ ಸವಾರನಿಗೆ ಡಿಕ್ಕಿಯಾಗುವ ಮೂಲಕ ಯುವಕ ದಾರುಣಾವಾಗಿ ಮೃತಪಟ್ಟಿದ್ದಾನೆ.

ಮೃತ ಯುವಕ ಉಚ್ಚಿಲ ನಿವಾಸಿ ರೀತೇಶ್ ದೇವಾಡಿಗ(25) ಈತ ವಾದ್ಯ ನುಡಿಸುವ ಕಾಯಕವನ್ನು ನಡೆಸುತ್ತಿದ್ದ ಎನ್ನಲಾಗಿದ್ದು, ಈತ ಉಡುಪಿ ಕಡೆಗೆ ಹೆದ್ದಾರಿ ಮೂಲಕ ಪ್ರಯಾಣಿಸುತ್ತಿದ್ದಾಗ ಅಂಬುಲೆನ್ಸ್ ಇನೋವ ಕಾರು, ಪಥ ಬದಲಿಸಿ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಸ ಬೇಕಾಗಿದ್ದರೂ ಆತ ನೇರವಾಗಿ ಹೆದ್ದಾರಿಯಲ್ಲೇ ಮುಂದುವರಿದು ಈ ಅಪಘಾತಕ್ಕೆ ಕಾರಣವಾಗಿದೆ. ಈ ಅಂಬುಲೆನ್ಸ್ ನಲ್ಲಿ ಯಾವುದೇ ರೋಗಿಗಳು ಇಲ್ಲವಾಗಿದ್ದರೂ ಈತ ನಿರ್ಲಕ್ಷ್ಯ ವಾಗಿ ತನ್ನದಲ್ಲದ ಪಥದಲ್ಲಿ ಸಂಚರಿಸಿ ಯುವಕ ಸಾವಿಗೆ ಕಾರಣವಾಗಿದ್ದು, ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯ ದಿಂದ ನಿರಂತರವಾಗಿ ನಡೆಯುತ್ತಿರುವ ಅಪಘಾತದಿಂದಾಗಿ ಘಟನಾ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಇಲಾಖೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.