ಅಡುಗೆಮನೆಯ ನೆಂಟ ಈ ಕವಳೆಕಾಯಿ
ಕರಂಡೆಯು ಹುಳಿ ಕಾಡು ಕಾಯಿಯಾಗಿದ್ದು, ಹಣ್ಣಾದಾಗ ನೀಲಿ ದ್ರಾಕ್ಷಿಯ ರುಚಿ ಹೊಂದಿದೆ. ಬ್ರಿಟನ್, ಅಮೆರಿಕದ ಕ್ರಾನ್‌ಬೆರಿ ಇದೇ ರುಚಿಯದು, ತುಸು ದೊಡ್ಡದು.ವ್ಯಾಪಕವಾಗಿ ಬೆಳೆಸಿ ನಾವು ಬಳಸುವಂತೆಯೇ ಬಳಸುತ್ತಾರೆ.
ಕರಂಡೆಯನ್ನು ಉಪ್ಪಿನಕಾಯಿ ಹಾಕುತ್ತಾರೆ, ಉಪ್ಪಿನಲ್ಲಿ ಹಾಕಿ ಇಡುತ್ತಾರೆ. ಬೇಯಿಸಿ ಒಣಗಿಸಿಟ್ಟು ಹುಣಸೆ ಹುಳಿಯ ಬದಲು ಬಳಸುತ್ತಾರೆ. ರೈಲಿನಲ್ಲಿ ಪೂನಾ ಮುಂಬಯಿ ನಡುವೆ ಲೋನಾವಳ ಬಳಿ ಇದರ ಹಣ್ಣನ್ನು ಎಲೆಯಲ್ಲಿ ಕಟ್ಟಿ ಮಾರುವ ಬುಡಕಟ್ಟು ಮಹಿಳೆಯರು ಕಾಣಿಸುತ್ತಾರೆ.ತುಳುವರು ಹಣ್ಣು ಆರಿಸಿ ತಿನ್ನುವರು.
ಭಾರತ ಮತ್ತು ನೆರೆ ದೇಶಗಳಲ್ಲಿ ಬೆಳೆಯುವ ಕರಂಡೆಯನ್ನು ಎಪೋಸೈನೇಸೀ ಕುಟುಂಬದ ಕಾರಿಸ್ಸಾ ಜಾತಿ ಎನ್ನಲಾಗಿದೆ.ಒಣಗಿಸಿದ ಕ್ರಾನ್‌ಬೆರಿ ಹಣ್ಣು ಎಲ್ಲ ಕಡೆ ಸಿಗುತ್ತದೆ. ಕರಂಡೆಯನ್ನು ಕನ್ನಡದಲ್ಲಿ ಕವಳೆಕಾಯಿ ಎನ್ನುವರು.ಕರಂಡೆಯ ಹೂವು ಗುಲಾಬಿ ಹೂವಿನಂತೆಯೇ ಇರುತ್ತದೆ. ಕಾಡು ಗುಡ್ಡೆ ನಾಶದಿಂದ ಇದು ವಿನಾಶದ ಅಂಚಿನಲ್ಲಿದೆ.