ಕಿನ್ನಿಗೋಳಿ : ಬಲಿಪ ನಾರಾಯಣ ಮತ್ತು ವೇಷಧಾರಿ ಅಂಬಾತನಯ ಮುದ್ರಾಡಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕಿನ್ನಿಗೋಳಿ: ಯಕ್ಷಲಹರಿ(ರಿ) ಕಿನ್ನಿಗೋಳಿ, ದ.ಕ. ಮತು ವಿಜಯ ಕಲಾವಿದರು ಕಿನ್ನಿಗೋಳಿ ಹಾಗು ಯುಗಪುರುಷ ಕಿನ್ನಿಗೋಳಿ ಇದರ ವತಿಯಿಂದ ಗುರುವಾರ ಸಂಜೆ.5-30ಕ್ಕೆ ಗಂಟೆಗೆ ಯುಗಪುರುಷದ ಸಭಾಭವನದಲ್ಲಿ ತೆಂಕುತಿಟ್ಟು ಯಕ್ಷರಂಗದ ಭೀಷ್ಮರೆಂದೇ ಖ್ಯಾತರಾದ ಬಲಿಪ ನಾರಾಯಣ ಭಾಗವತರ ಮತ್ತು ಕವಿ,ಪ್ರಸಂಗಕರ್ತ,ಅರ್ಥಧಾರಿ ವೇಷಧಾರಿ ಅಂಬಾತನಯ ಮುದ್ರಾಡಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮನ್ನು ನಡೆಯಲಾಯಿತು. ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ ದಿ.ಬಲಿಪ ಭಾಗವತರು ಹಾಗೂ ಅಂಬಾತನಯ ಮುದ್ರಾಡಿ ರವರು ಯಕ್ಷಗಾನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದರು. ಈ ಸಂದರ್ಭ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನ ವೆಂಕಟೇಶ ಹೆಬ್ಬಾರ್, ಪದ್ಮರಾಜ್ ಎಕ್ಕಾರ್, ಬಾಲಕೃಷ್ಣ ಉಡುಪ, ಮುಖ್ಯಪ್ರಾಣ ಕಿನ್ನಿಗೋಳಿ, ಪಶುಪತಿ ಶಾಸ್ತ್ರಿ, ವಸಂತ ದೇವಾಡಿಗ, ಯುಗಪುರುಷ ಸಂಸ್ಥೆಯ ಭುವನಾಭಿರಾಮ ಉಡುಪ, ಯಕ್ಷಲಹರಿ ಸಂಸ್ಥೆಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ ಹಾಗೂ ವಿಜಯ ಕಲಾವಿದರು ಕಿನ್ನಿಗೋಳಿ ಅಧ್ಯಕ್ಷರು ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.