ಪ್ರಗತಿಪರ ಕೃಷಿಕ ಆಂಡ್ರೊ ಮಿಸ್ಕಿಟ್ ನಿಧನ

ಕಿನ್ನಿಗೋಳಿ: ಪೊಂಪೈ ಪದವಿಪೂರ್ವ ಕಾಲೇಜು ಐಕಳ ಇದರ ವಾಣಿಜ್ಯ ವಿಭಾಗದ ನಿವೃತ ಲ್ಯಾಬ್ ಅಸಿಸ್ಟೆಂಟ್ ಹಾಗೂ ಕಟೀಲು ಸಂತ ಜಾಕೋಬ್ ದೇವಾಲಯದ ಮಾಜಿ ಉಪಾಧ್ಯಕ್ಷರು ಮತ್ತು ಪ್ರಗತಿಪರ ಕೃಷಿಕರು ಆಗಿರುವಂತ ಆಂಡ್ರೊ ಮಿಸ್ಕಿಟ್ ಇಂದು ಬೆಳಿಗ್ಗೆ ನಿಧನರಾದರು. ಅವರು ತೋಟದ ಕೆಲಸದಲ್ಲಿ ತೊಡಗಿರುವ ಸಂದರ್ಭದಲ್ಲಿ ಫೆಬ್ರವರಿ ಒಂದರಂದು ಹೆಜ್ಜೇನು ನೊಣಗಳ ದಾಳಿಗೆ ಸಿಲುಕಿ ತುರ್ತಾಗಿ ಆಸ್ಪತ್ರೆಗೆ ತೀವ್ರ ನಿಗಾ ಘಟಕಕ್ಕೆ ಸೇರಿಸಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧಾನರಾದರೂ ಅವರು ಪತ್ನಿ ಇಬ್ಬರು ಮಕ್ಕಳನ್ನು ಅಳಿಯ ಸೊಸೆ ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Related Posts

Leave a Reply

Your email address will not be published.