ಕಿನ್ನಿಗೋಳಿಯಲ್ಲಿ ಯುವ ಸಂಕಲ್ಪ ಕಾರ್ಯಕ್ರಮ

ಕಿನ್ನಿಗೋಳಿ: ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯುವ ನಾಯಕ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನೇತ್ರತ್ವದಲ್ಲಿ ಯುವ ಸಂಕಲ್ಪ ಕಾರ್ಯಕ್ರಮ ಕಿನ್ನಿಗೋಳಿ ಸಮೀಪದ ಎಸ್.ಕೋಡಿ ಪದ್ಮಾವತಿ ಸಭಾಭವನದಲ್ಲಿ ನಡೆಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯ್ ಚಂದ್ರ ಜೈನ್ ಮಾತನಾಡಿ ಈಗಿನ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಬೆಲೆ ಏರಿಕೆಗೆ ಕಡಿವಾಣ ಇಲ್ಲದಂತಾಗಿದೆ. ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡಿದ ಸಾಧನೆಗಳನ್ನು ಬಿಜೆಪಿ ಸರಕಾರ ತನ್ನದೆಂದು ಹೇಳುತ್ತಿದೆ. ಸುಳ್ಳು. ಹಣ ಬಿಜೆಪಿ ಸರಕಾರ ತೊಲಗಿಸಿ ಭ್ರಷ್ಟಾಚಾರ ಮುಕ್ತ ಆಡಳಿತ ಒದಗಿಸಲು ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿ ಎಂದರು.

ಕೆಪಿಸಿಸಿ ವಕ್ತಾರ ನಿಕಿತ್ ರಾಜ್ ಮೌರ್ಯ ದಿಕ್ಕೂಚಿ ಭಾಷಣದಲ್ಲಿ ವಾಯುಮಾರ್ಗ ರೈಲು ಮಾರ್ಗ ಮತ್ತು ನೆಲ ಮಾರ್ಗಗಳನ್ನು ಆ ಕಾಲದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿತ್ತು ಆದರೆಪ್ರಸ್ತುತ ಬಿಜೆಪಿ ಸರ್ಕಾರದವರು ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಿದ್ದಾರೆ ಅಷ್ಟೇ ಅಲ್ಲದೆ ಹಲವು ಏಪೆರ್Çೀರ್ಟ್ ಮತ್ತು ಹಲವು ಜಾಗಗಳನ್ನು ಖಾಸಗಿಕರಣ ಮಾಡಿದ್ದು ಪ್ರಸ್ತುತ ಅವರು ನಂದಿನಿ ಎನ್ನು ಅಮುಲ್ ಜೊತೆ ವಿಲೀನ ಮಾಡಲಿದ್ದಾರೆ ಹಾಗಾದರೆ ನಾವು ಕರ್ನಾಟಕದವರು ಕಟ್ಟಿ ಬೆಳೆಸಿದ್ದಕ್ಕೆ ಬೆಲೆ ಇಲ್ವಾ ಇಷ್ಟು ಭ್ರಷ್ಟ ಸರ್ಕಾರ ನಮಗೆ ಬೇಕೆ ಎಂದಿದ್ದಾರೆ. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುನ್ಮಾನ್ ಬಂಟ್ವಾಳ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಮುಲ್ಕಿ ಬ್ಲಾಕ್ ಮಹಿಳಾ ಅಧ್ಯಕ್ಷೆ ಪದ್ಮಾವತಿ, ಕಾಂಗ್ರೆಸ್ ನಾಯಕರಾದ ಬಾಲಾದಿತ್ಯ ಆಳ್ವ ಗುರುರಾಜ್ ಎಸ್. ಪೂಜಾರಿ, ಮಂಜುನಾಥ್ ಕಂಬಾರ, ಪ್ರಸಾದ್ ಮಲ್ಲಿ, ಸರ್ಪರಾಜ್ ಬಾಳ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ರಕ್ಷಿತ್ ಸುವರ್ಣ,ಪ್ರವೀಣ್ ಬೊಳ್ಳೂರು ಕಿರಣ್ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.