ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಪ್ರೋತ್ಸಾಹ ಧನ : ದಕ್ಷಿಣ ಕನ್ನಡ ಹಾಲು ಒಕ್ಕೂಟದ ಮಂಡಳಿಯಿಂದ ನಿರ್ಧಾರ

ದಕ್ಷಿಣ ಕನ್ನಡ ಹಾಲು ಒಕ್ಕೂಟ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ 2 ರೂಪಾಯಿ 5 ಪೈಸೆ ಪ್ರೋತ್ಸಾಹಧನವನ್ನು ನೀಡುವುದಾಗಿ ಒಕ್ಕೂಟದ ಅಧ್ಯಕ್ಷರಾದ ಕೆ.ಪಿ. ಸುಚರಿತ ಶೆಟ್ಟಿ ತಿಳಿಸಿದ್ದಾರೆ.

ಅವರು ಕುಲಶೇಖರದ ಹಾಲು ಒಕ್ಕೂಟದ ಆಡಳಿತ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಅಕ್ಟೋಬರ್ 11ರಂದು ನಡೆಯಲಿರುವ ವಿಶೇಷ ಸಭೆಯಲ್ಲಿ ರೈತರಿಗೆ ಪ್ರೋತ್ಸಾಹಧನವಾಗಿ ವಿಶೇಷವಾಗಿ 29.5 ಪೈಸೆಯನ್ನು ನೀಡುತ್ತಿದ್ದು ಅದಕ್ಕೆ 2 ರೂಪಾಯಿ 5 ಪೈಸೆ ಏರಿಸಿ ಪ್ರೋತ್ಸಾಹಧನವನ್ನು ರೈತರಿಗೆ ನೀಡುತ್ತೇವೆ. ಇದರ ಜೊತೆಗೆ ದಕ್ಷಿಣ ಕನ್ನಡ ಹಾಲು ಒಕ್ಕೂಟ ಈ ವರ್ಷದಲ್ಲಿ ಮಣಿಪಾಲದಲ್ಲಿ ಐಸ್‍ಕ್ರೀಂ ಪ್ಲಾಂಟ್‍ನ್ನು ಸ್ಥಾಪಿಸಲಿದ್ದೇವೆ. ಮಂಗಳೂರಿನಲ್ಲಿ ಹಾಲು ಒಕ್ಕೂಟದ ಸಂಕೀರ್ಣದಲ್ಲಿ ಉನ್ನತ ಶಿಕ್ಷಣ ಪಡೆಯಲು ರೈತರ ಹೆಣ್ಣುಮಕ್ಕಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಲೇಡಿಸ್ ಹಾಸ್ಟೆಲನ್ನು ನಿರ್ಮಿಸಲಿದ್ದೇವೆ ಎಂದರು. ರೈತರ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಸ್ಪಂದಿಸುವ ಸಲುವಾಗಿ ಆಡಳಿತ ಮಂಡಳಿ ಆಡಳಿತ ವ್ಯವಸ್ಥೆಯ ಲಾಭ ನಷ್ಟಗಳನ್ನು ಸರಿದೂಗಿಸಿಕೊಂಡು ಪ್ರೋತ್ಸಾಹಧನವನ್ನು ಹೆಚ್ಚಳ ಮಾಡುತ್ತಿದ್ದೇವೆ ಎಂದು ಕೆ.ಪಿ. ಸುಚರಿತ ಶೆಟ್ಟಿ ಹೇಳಿದರು.

ಮಹಿಳಾ ಹಾಸ್ಟೇಲ್‍ನ್ನು ನಿರ್ಮಿಸಲಿದ್ದೇವೆ. ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ್ ಶೆಟ್ಟಿ, ದಕ್ಷಿಣ ಕನ್ನಡ ಹಾಲು ಒಕ್ಕೂಟದ ಎಂ.ಡಿ ಅಶೋಕ್ ಡಿ, ದಕ್ಷಿಣ ಕನ್ನಡ ಹಾಲು ಒಕ್ಕೂಟ ಮಾರ್ಕೆಟಿಂಗ್ ಮ್ಯಾನೇಜರ್ ಡಾ. ರವಿರಾಜ ಉಡುಪ ಉಪಸ್ಥಿತರಿದ್ದರು.
