ಕೊಂಕಣಿ ಭಾಷೆಗೆ ಸಂವಿಧಾನದ ಮಾನ್ಯತೆ ಪಡೆದ 30ನೇ ವರಷದ ಆಚರಣೆ
ಕೊಂಕಣಿ ಭಾಶಾ ಮಂಡಲ್ ಕರ್ನಾಟಕ ಇದರ ಆಶ್ರಯದಲ್ಲಿ ಕೊಂಕಣಿಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದ ಅಡಿಯಲ್ಲಿ ಸೇರಿಸಿದ ಮೂವತ್ತು ವರ್ಷದ ಸಂಭ್ರಮಾಚರಣೆಯು ನಗರದ ಡೊನ್ ಬೊಸ್ಕೊಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಿಎ ಎಸ್ ಎಸ್ ನಾಯಕ್ ಅವರು ಮಾತನಾಡುತ್ತಾ, ತಾಯಿಯ ಮಾತಿನ ಮಹತ್ವವು ಜೀವನದಲ್ಲಿ ಯಾವುದೇ ದಿನ ಕಡಿಮೆ ಆಗದು.ಹಾಗೆನೇ ಮಾತೃ ಭಾಷೆಯ ಮಹತ್ವ ಕೂಡಾ ಆಗಿದೆ. ಇತರ ಯಾವುದೇ ಭಾಷೆಗಳು ವ್ಯಾವಹಾರಿಕವಾಗಿ ಕಲಿತರೂ ಮಾತೃಭಾಷೆಯ ಜಾಗವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರು.
ಭಾಷೆಗಳನ್ನು ಉಳಿಸಲು ನಮ್ಮ ಮುಂದಿನ ಪೀಳಿಗೆಗೆ ಕಲಿಸಿ ಮಾತನಾಡುವ ಹಾಗೆ ಮಾಡಲು 1974 ಇಸವಿಯಲ್ಲಿ ಕೊಂಕಣಿ ಭಾಶಾ ಮಂಡಳ್ ಕರ್ನಾಟಕವು ಆರಂಭವಾಗಿ ಕಳೆದ 48 ವರ್ಷಗಳಲ್ಲಿ ಪ್ರತಿ ವರ್ಷವೂ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಹಾಗೆನೇ ಈ ಬಾರಿಯೂ ಪ್ರೌಢಶಾಲಾ ಹಾಗೂ ಕಾಲೇಜು ವಿಭಾಗದ ಕೊಂಕಣಿ ವಿನೋದಾವಳಿ ಸ್ಪರ್ಧೆಗಳು ಅಯೋಜನೆ ಮಾಡಲಾಗಿತ್ತು.
ನಂತರ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡುವ ಸಮಾರೋಪ ಕಾರ್ಯಕ್ರಮದಲ್ಲಿ ನಾಟಕಕಾರ, ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ಹಿರಿಯ ಡಿಜಿಎಮ್ ರೊಬರ್ಟ್ ಡಿಸಿಲ್ವಾ, ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ದಿನೇಶ್ ಭಟ್ಟ ಇದ್ದರು.
ಕೊಡಿಯಾಲ್ ಕೊಬರ್ ಡೊಟ್ ಕೊಮ್ ಸಂಪಾದಕರಾದ ವೆಂಕಟೇಶ್ ಬಾಳಿಗ ಅವರು ಕೊಂಕಣಿ ಮಾನ್ಯತೆಯ ಬಗ್ಗೆ ಉಪನ್ಯಾಸ ನೀಡಿದರು.
ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಅದ್ಯಕ್ಷ ಕೆ ವಸಂತ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ನಿರ್ವಹಣೆ ಮಾಡಿದರು.
ಮೊದಲಿಗೆ ಕಾರ್ಯಕ್ರಮ ಸಂಚಾಲಕ ಹಾಗೂ ಉಪಾಧ್ಯಕ್ಷ ರತ್ನಾಕರ್ ಕುಡ್ವಾ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಜೂಲಿಯೆಟ್ ಪೆರ್ನಾಂಡಿಸ್ ವಂದಿಸಿದರು.
ಸುರೇಶ್ ಶೆಣೈ ವೇದಿಕೆಯ ಇದ್ದರು.ಕಾರ್ಯಕಾರಿ ಸದಸ್ಯರು ಹಾಗೂ ಸದಸ್ಯರು ಯಶಸ್ವಿಯಾಗಿ ನಡೆಯಲು ಸಹಕರಿಸಿದರು
ಸ್ಪರ್ಧೆಯಲ್ಲಿ ವಿಜೇತರು: ಪ್ರೌಢಶಾಲಾ ವಿಭಾಗದಲ್ಲಿ; ಮೊದಲ ಬಹುಮಾನ ಸಂತ ಅಲೋಶಿಯಸ್ ಪ್ರೌಢ ಶಾಲೆ, ದ್ವಿತೀಯ ಕೆನರಾ ಹಿರಿಯ ಪ್ರಾಥಮಿಕ ಶಾಲೆ, ತೃತೀಯ ಉರ್ವದ ಕೆನರಾ ಪ್ರೌಢ ಶಾಲೆ.ಕಾಲೇಜು ವಿಭಾಗದಲ್ಲಿ; ಪ್ರಥಮ ಮಿಲಾಗ್ರಿಸ್ ಕಾಲೇಜು, ದ್ವಿತೀಯ ಸಂತ ಅಲೋಶಿಯಸ್ ಕಾಲೇಜು, ತೃತೀಯ ಕೆನರಾ ಡಿಗ್ರಿ ಕಾಲೇಜು.
ಸೂತ್ರದಾರ ವೈಯಕ್ತಿಕ ಪ್ರಶಸ್ತಿಯನ್ನು ಪ್ರೌಢಶಾಲಾ ವಿಭಾಗದಲ್ಲಿ ಸಂತ ಅಲೋಶಿಯಸ್ ಹಾಗೂ ಕಾಲೇಜು ವಿಭಾಗದಲ್ಲಿ ಮಿಲಾಗ್ರಿಸ್ ಕಾಲೇಜು ಪಡೆಯಿತು.