ಕಲಾವಿದನ ಬದುಕಿಗೆ ಜೀವ ತುಂಬುವವರು ಕಲಾಭಿಮಾನಿಗಳು : ಕಟೀಲ್‍ನ ಹರಿನಾರಾಯಣ ಅಸ್ರಣ್ಣರು ಅಭಿಪ್ರಾಯ

ಕಾರ್ಕಳ: ಯಕ್ಷಗಾನವೆಂಬುದು ಕರಾವಳಿಯ ಮಣ್ಣಿನ ಕಲೆಯಾಗಿದೆ ಈ ಕಲೆಯು ಸ್ವರ್ಗವನ್ನ ಭೂಮಿಯಲ್ಲಿ ಭಾಸವಾಗುವಂತೆ ಸ್ಪರ್ಶವಿಲ್ಲದೆ ನಿಭಾಯಿಸುವಂತೆ ಮಾಡುತ್ತದೆ ಕಲಾವಿದನ ಬದುಕಿಗೆ ಕಲಾ ಸಂಘಟಕರು ಕಲಾ ಕಲಾಭಿಮಾನಿಗಳು ಜೀವ ತುಂಬುವವರು ಆಗಿರುತ್ತಾರೆ. ಎಂದು ಕಟೀಲ್‍ನ ಹರಿನಾರಾಯಣ ಅಸ್ರಣ್ಣರು ಹೇಳಿದರು.

ಅವರು ನಾರಾವಿಯ ಧರ್ಮ ಶ್ರೀ ಸಭಾಭವನದ ಬಲಿಪ ಪ್ರಸಾದ ಭಟ್ ವೇದಿಕೆಯಲ್ಲಿ ಜರುಗಿದ ಯಕ್ಷ ತೀರ್ಥ ಸಂಭ್ರಮ 2022ರ ಕಾರ್ಯಕ್ರಮವನ್ನು ಉದ್ಘಾಟಿಸಿ, ಉದ್ದೇಶಿಸಿ ಆಶೀರ್ವಚನ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

karkala

ಈ ಸಂದರ್ಭದಲ್ಲಿ ಯಕ್ಷ ತೀರ್ಥ ಸಂಘಟನಾ ಪ್ರಶಸ್ತಿಯನ್ನು ಸುಮಾರು 25 ವರ್ಷಗಳಿಂದ ಸಂಘಟನೆ ಮಾಡುತ್ತಿರುವ ಶ್ರೀ ಎಂ ದೇವಾನಂದ್ ಬೆಳವಾಯಿ ಇವರಿಗೆ ಸಮರ್ಪಿಸಲಾಯಿತು. ಚಿನ್ನದ ಪದಕದೊಂದಿಗೆ ಸ್ಮರಣಕ್ಕೆ ನೀಡಲಾಯಿತು. ನಂತರ ಯಕ್ಷಗಾನದ ಹಿರಿಯ ಅರ್ಥದಾಡಿ ಶ್ರೀ ಜಬ್ಬಾರ್ ಸೋಮು ಸಂಪಾಜಿ ಇವರಿಗೆ ಯಕ್ಷ ವಿದಾತ ತೀರ್ಥ ಎಂಬ ಬಿರುದುಕೊಟ್ಟು ಚಿನ್ನದ ಪದಕ ದೊಂದಿಗೆ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು. ಯಕ್ಷ ತೀರ್ಥ ಕಲಾ ಸೇವೆ ನೂರಾಲ್ ಬೆಟ್ಟು ಆಯೋಜನೆಯಲ್ಲಿ ಸಂಪನ್ನಗೊಂಡ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸದಾನಂದ ಎಸ್ ಆಚಾರ್ಯ ನೂರಾಳ್ ಬೆಟ್ಟು ಶಾಲು ಹಾಕಿ ಅತಿಥಿಗಳನ್ನು ಗೌರವಿಸಿದರು.

karkala

ಮುನಿಯಾಲು ಜಿಎಸ್ ಪುರಂದ್ ಪುರಂದರ ಪುರೋಹಿತ್ ಇವರು ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅತಿಥಿ ಮುಖ್ಯ ಅತಿಥಿಗಳೊಂದಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಪೂಂಜ ಉಪಸ್ಥಿತರಿದ್ದರು. ನಂತರ ತೆಂಕು ಬಡಕಿನ ಖ್ಯಾತ ಕಲಾವಿದ ಜನಸಾಲೆ ರಾಘವೇಂದ್ರ ಆಚಾರ್ ಮತ್ತು ಸತೀಶ್ ಶೆಟ್ಟಿ ಪಟ್ಲ ಇವರ ಸಾರಥ್ಯದಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನೆರವೇರಿತು.

Related Posts

Leave a Reply

Your email address will not be published.