ಸುರತ್ಕಲ್ ಆಪದ್ಭಾಂಧವ ಸಮಾಜ ಸೇವಾ ಸಂಸ್ಥೆಯಿಂದ ಕೂಳೂರು ಮೇಲ್ಸೇತುವೆ ದುರಸ್ತಿಗೆ ಆಗ್ರಹ

ಸುರತ್ಕಲ್: ಕೂಳೂರು ಮೇಲ್ಸೇತುವೆ ದುರಸ್ತಿಗೆ ಒತ್ತಾಯಿಸಿ ಸುರತ್ಕಲ್ ಆಪದ್ಭಾಂಧವ ಸಮಾಜ ಸೇವಾ ಸಂಸ್ಥೆ ಯಿಂದ ಮಂಗಳೂರು ಉತ್ತರ ಸಂಚಾರಿ ಠಾಣಾ ನಿರೀಕ್ಷಕ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕಳೆದ ಎರಡು ವಾರಗಳಿಂದ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ 66ರ ಕೂಳೂರು ಮೇಲ್ಸೇತುವೆಯಲ್ಲಿ ಟ್ರಾಫಿಕ್ ಜಾಂ ಸಂಭವಿಸುತ್ತಿದೆ.ಆಂಬುಲೆನ್ಸ್  ಸಿಲುಕಿಕೊಳ್ಳುತ್ತಿದ್ದು ರೋಗಿಗಳು ಒದ್ದಾಡುವಂತಾಗಿದೆ.ಕೆಲಸಕ್ಕೆ ಹೋಗುವವರಿಗೆ ತೊಂದರೆ ಯಾಗುತ್ತಿದೆ.ಕಳಪೆ ಕಾಮಗಾರಿಗೆ  ಅಧಿಕಾರಿಗಳನ್ನು ಹೊಣೆ ಮಾಡಿ, ಯಾವುದಾದರೂ ಜೀವ ಹಾನಿಯಾದರೆ  ಹೆದ್ದಾರಿ ಇಲಾಖೆಯ ಅಧಿಕಾರಿಗಳ ಮೇಲೆ ಕೇಸು ದಾಖಲಿಸಿಕೊಳ್ಳವಬೇಕು .ಆಗ ಸಮಸ್ಯೆ ಅವರಿಗೆ ಅರ್ಥ ವಾಗುತ್ತದೆ ಎಂದು ಸ್ಥಾಪಕಾಧ್ಯಕ್ಷ  ಉಮೇಶ್ ದೇವಾಡಿಗ ಇಡ್ಯಾ ಮನವಿ ಮಾಡಿದರು.

ಮಳೆಗಾದಲ್ಲಿ ಸಮರ್ಪಕ ಡಾಮರು ಹಾಕದೆ ವಾಹನ ಓಡಾಟ ಕಷ್ಟವಾಗಿದೆ.ವಾಹನಗಳು ಸಿಲುಕಿಕೊಂಡು ಸಂಕಷ್ಟ ಅನುಭವಿಸಬೇಕಾಗಿದೆ.ನಿರ್ವಹಣೆ ಮಾಡಲು ಇಲಾಖೆಗೆ ಯಾರು ಸಿಗದೆ ಇರಲು ಕಾರಣ ಏನು .ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಅವ್ಯವಸ್ಥೆ ಉಂಟಾಗಿದೆ ಎಂದು ಮಾಜಿ ಯೋಧ ಭಾಸ್ಕರ್  ರೈ ಆವರು ನುಡಿದರು.ಲೀಲಾಧರ ಕಡಂಬೋಡಿ,ಸುರೇಂದ್ರ ಆಚಾರ್ಯ ಉಪಸ್ಥಿತರಿದ್ದರು.

Related Posts

Leave a Reply

Your email address will not be published.