ಮೂಡಬೆಳ್ಳೆ ವ್ಯಾಪ್ತಿಯಲ್ಲಿ ಸಂಪೂರ್ಣ ಬೆಳೆ ನಾಶ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಗದ್ದೆಯಲ್ಲಿ ನೀರು ನಿಂತು ಕಷ್ಟಪಟ್ಟು ಮಾಡಿದ ಸಹಸ್ರಾರು ಎಕ್ರೆ ಕೃಷಿ ನಾಶಗೊಂಡಿದೆ.
ಈ ಬಗ್ಗೆ ಮಾತನಾಡಿದ ಉಡುಪಿ ತಾ.ಪಂ. ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಮಳೆಯ ಆರ್ಭಟಕ್ಕೆ ಕೃಷಿ ಭೂಮಿಯಲ್ಲಿ ನೀರು ನಿಂತು ಬಹಳಷ್ಟು ಖರ್ಚು ಮಾಡಿ ಮಾಡಿದ ನಾಟಿ, ನೀರಿನಡಿಯಲ್ಲಿ ಕೊಳೆಯುತ್ತಿದ್ದು, ಕೃಷಿಕರು ಕಂಗ್ಗಲಾಗಿದ್ದಾರೆ. ಅಳಿವಿನ ಹಂತದಲ್ಲಿರುವ ಕೃಷಿ ಚಟುವಟಿಕೆಗಳನ್ನು ನಡೆಸಿ ಕೈ ಸುಟ್ಟುಕೊಂಡಿರುವ ಕೃಷಿಕರ ನೆರವಿಗೆ ಜಿಲ್ಲಾಡಳಿತ ಬಂದು ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ. ಅವರೊಂದಿಗೆ ಪ್ರಗತಿಪರ ಕೃಷಿಕ ಸಂತೋಷ್ ಪಂಜಿಮಾರ್, ಕಟ್ಟಿಂಗೇರಿ ಹಿರಿಯ ಕೃಷಿಕ ಭಾಸ್ಕರ್ ಶೆಟ್ಟಿ ಇದ್ದರು.