ಕುಂದಾಪುರ: ದಲಿತ ಸಂಘರ್ಷ ಸಮಿತಿ ನಾಡ ಶಾಖೆ ಪುನರ್ ರಚನೆ,ಜನಶಕ್ತಿ ಸಮಾವೇಶ

ಕುಂದಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ನಾಡ (ಪಡುಕೋಣೆ) ಶಾಖೆ ಪುನರ್‍ರಚನೆ,ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಜನಶಕ್ತಿ ಸಮಾವೇಶದಲ್ಲಿ ನಾಡ ಗ್ರಾಮ ಪಂಂಚಾಯಿತಿ ಸಭಾಭವನದಲ್ಲಿ ನಡೆಯಿತು.


ಗಾಯಕ ರವಿ ಬನ್ನಾಡಿ ತಮ್ಮ ಕಂಠ ಸಿರಿ ಮೂಲಕ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಜಿಲ್ಲಾ ಸಂಘಟನಾ ಸಂಚಾಲಕ ಸುರೆಶ ಹಕ್ಲಾಡಿ ನಾಡ ಶಾಖೆಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು.ಮುಖ್ಯ ಮಂತ್ರಿ ಪದಕ ವಿಜೇತರಾದ ಅರಣ್ಯ ಇಲಾಖೆ ಸಿಬ್ಬಂದಿ ಶೇಷು,ಧಾರ್ಮಿಕ ಮುಖಂಡ ಸತೀಶ ಎಂ ನಾಯಕ್,ಉದ್ಯಮಿ ಅರವಿಂದ ಪೂಜಾರಿ,ವಕೀಲರಾದ ಮಂಜುನಾಥ ಗಿಳಿಯಾರ್,ರಾಜ್ಯ ಸಂಚಾಲಕ ಸುಂದರ್ ಮಾಸ್ಟರ್,ಜಿಲ್ಲಾ ಸಂಚಾಲಕ ಸುರೇಶ ಹಕ್ಲಾಡಿ ಅವರನ್ನು ನಾಡ ಶಾಖೆ ವತಿಯಿಂದ ಸನ್ಮಾನಿಸಲಾಯಿತು.


ಜಿಲ್ಲಾ ಸಂಚಾಲಕ ವಕೀಲರಾದ ಮಂಜುನಾಥ ಗಿಳಿಯಾರ್ ಮಾತನಾಡಿ,ಅಂಬೇಡ್ಕರ್ ಕಲ್ಪನೆಯ ಪ್ರಜಾಪ್ರಭುತ್ವ ಎಲ್ಲರಿಗೂ ಜೀವನ ಮತ್ತು ಬದುಕನ್ನು ಕಟ್ಟಿಕೊಳ್ಳಲು ಅವಕಾಶವನ್ನು ಮಾಡಿ ಕೊಟ್ಟಿದೆ. ಆವೊಂದು ನೆಲೆಯಲ್ಲಿ ಕರ್ನಾಟಕ ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ತಾಲೂಕು ಸಂಘಟನೆ ಸಹಿತ ಗ್ರಾಮ ಶಾಖೆಗಳನ್ನು ಹುಟ್ಟು ಹಾಕಿ ದುರ್ಬಲ ವರ್ಗ ಮತ್ತು ಸಾಮಾಜಿಕ ನ್ಯಾಯ ಸಿಗದ ವಂಚಿತ ಸಮುದಾಯಕ್ಕೆ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಚಳುವಳಿಗಳ ಮೂಲಕ ಸಂಘಟನೆಗಳನ್ನು ಪರಿಣಾಮಕಾರಿ ರೀತಿಯಲ್ಲಿ ಬೆಳೆಸಬೇಕಾದ ಅವಶ್ಯಕತೆ ಬಹಳಷ್ಟಿದೆ.ಸಮಾಜದಲ್ಲಿನ ಹೆಚ್ಚಿನ ಯುವಕರು ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಪ್ರಜಾಪ್ರಭುವತ್ವದ ಉಳಿವಿಗೆ ಶ್ರಮಿಸುವ ಕೆಲಸ ಮಾಡಬೇಕಾಗಿದೆ.
ಸಾಮಾಜಿಕ ನ್ಯಾಯ ಎನ್ನುವುದು ಸವಕಳಿ ನಾಣ್ಯದಂತ್ತಾಗಿದೆ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.


ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ ಮಾತನಾಡಿ,ನ್ಯಾಯುತವಾಗಿ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕಾಗಿ ಸಂಘಟನೆಯನ್ನು ಕಟ್ಟಲಾಗಿದ್ದು.ಸಂವಿಧಾನಿಕ ನೆಲೆಯಲ್ಲಿ ಭೂಮಿಗಾಗಿ ಹೋರಾಟ ಮತ್ತು ಆತ್ಮಗೌರವಕ್ಕಾಗಿ ಹೋರಾಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ.ಯಾವುದೆ ರೀತಿಯ ಆರ್ಥಿಕ ಮೂಲವಿಲ್ಲದೆ ಸಮುದಾಯದ ಜನರ ಒಗ್ಗೂಡುವಿಕೆ ಯಿಂದ ಕಾರ್ಯಕ್ರಮಗಳನ್ನು ಆಯೋಜನೆಯನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.


ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ ಹಕ್ಲಾಡಿ ಪ್ರಮಾಣ ವಚನ ಬೋಧಿಸಿ ಮಾತನಾಡಿ,ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಐವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಗ್ರಾಮೀಣ ಜನರನ್ನು ಒಗ್ಗೂಡಿಸುವ ದೃಷ್ಟಿಯಿಂದ ಗ್ರಾಮ ಶಾಖೆಗಳನ್ನು ಪುನರ್ ರಚನೆ ಮಾಡುವ ಕೆಲಸವನ್ನು ಮಾಡಲಾಗುತ್ತಿದ್ದು.ಸಮುದಾಯ ಭಾಂದವರಿಂದ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಮಾತನಾಡಿ,ಕೇಂದ್ರ ಸರಕಾರದ ಮಟ್ಟದಲ್ಲಿ ಸಂವಿಧಾನವನ್ನು ಬುಡಮೇಲು ಮಾಡುವ ಹುನ್ನಾರ ಈ ಹಿಂದೆ ನಡೆದಿತ್ತು.ದೇಶಾದ್ಯಂತ ನಡೆದ ದಲಿತ ಚಳುವಳಿ ಯಿಂದಾಗಿ ಆವೊಂದು ಶಕ್ತಿಯನ್ನು ಮಟ್ಟ ಹಾಕಲು ಸಾಧ್ಯವಾಗಿದೆ.ಸಂವಿಧಾನ ಗಟ್ಟಿಗೊಳ್ಳಬೇಕಾದರೆ ಸಂಘಟನೆಗಳು ಗಟ್ಟಿಕೊಳ್ಳಬೇಕು ಎಂದರು.

ಜಿಲ್ಲಾ ಉಪ ಪ್ರಧಾನ ಸಂಚಾಲಕ ಶ್ಯಾಮರಾಜ್ ಬಿರ್ತಿ ‌ಅವರು ಮಾತನಾಡಿ,ದಲಿತ ಸಂಘರ್ಷ ಸಮಿತಿ ಯಾವುದೇ ರೀತಿಯ ಯುವಕ ಮಂಡಲ ರೀತಿ ಸಂಘಟನೆ ಅಲ್ಲಾ, ಸಂವಿಧಾನದ ಹಕ್ಕುಗಳನ್ನು ಶೋಷಿತ ವರ್ಗದ ಸಮಾಜಕ್ಕೆ ನೀಡುವ ಕುರಿತು ಹಾಗೂ ನ್ಯಾಯುತವಾಗಿ ಒದಗಿಸಿಕೊಡುವ ಕುರಿತು ನಿರ್ಮಿತ ಗೊಂಡ ಘಟನೆ ಆಗಿದೆ ಎಂದು ಹೇಳಿದರು.

ಮರವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ ನಾಯಕ್, ಅರವಿಂದ ಪೂಜಾರಿ,ಧಾರ್ಮಿಕ ಮುಖಂಡ ಶರತ್ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಶುಭ ಹಾರೈಸಿದರು

ನಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಮೊಗವೀರ ಉದ್ಘಾಟಿಸಿ ಶುಭಹಾರೈಸಿದರು,

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್‍ರಾಜ್ ತೆಕ್ಕಟ್ಟೆ,ಕುಮಾರ್ ಕೋಟ, ,ಉದ್ಯಮಿ ಮಂಜುನಾಥ ಪೂಜಾರಿ ಸೇನಾಪುರ,ನಾಡ ಪಂಚಾಯಿತಿ ಸದಸ್ಯ ಸುಧಾಕರ ಶೆಟ್ಟಿ,ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ,ಮಂಜುನಾಥ ಹಳಗೇರಿ,ಭಾಸ್ಕರ ಕೆರ್ಗಾಲ್,ಗೀತಾ ಸುರೇಶ ಕುಮಾರ್,ಶಿವರಾಜ್ ಬೈಂದೂರು,ಗೋಪಾಲಕೃಷ್ಣ ನಾಡ,ತಾಲೂಕು ಸಮಿತಿ ಕುಂದಾಪುರ ಸತೀಶ ರಾಮನಗರ,ನಾಡ ಶಾಖೆ ಸಂಘಟನಾ ಸಂಚಾಲಕ ರಮೇಶ ಪಡುಕೋಣೆ,ಗ್ರಾಮ ಶಾಖೆ ಸಂಚಾಲಕಿ ಜ್ಯೋತಿ ಸುರೇಶ,ಅರನ್ಯ ಇಲಾಖೆ ಸಿಬ್ಬಂದಿ ಶೇಷು ಪಡುಕೋಣೆ,ಸಂಚಾಲಕ ಪ್ರದೀಪ್,ಕೋಶಾಧಿಕಾರಿ ಕೃಷ್ಣ,ಸುರೇಶ ಪಡುಕೋಣೆ,ಕುಂದಾಪುರ ಮತ್ತು ಬೈಂದೂರು ತಾಲೂಕು ಸಮಿತಿ ಸಂಚಾಲಕರು ಹಾಗೂ ವಿವಿಧ ಗ್ರಾಮ ಶಾಖೆಗಳ ಸಂಚಾಲಕರು ಉಪಸ್ಥಿತರಿದ್ದರು.

ಗೋಪಾಲಕೃಷ್ಣ ನಾಡ ಸ್ವಾಗತಿಸಿದರು. ಸಮೀಕ್ಷಾ ಸುರೇಶ ಹಕ್ಲಾಡಿ ಪ್ರಾರ್ಥಿಸಿದರು. ಶಂಭು ಗುಡ್ಡಮ್ಮಾಡಿ ಮತ್ತು ರವಿ ಬನ್ನಾಡಿ ನಿರೂಪಿಸಿದರು.ಸತೀಶ ರಾಮನಗರ ವಂದಿಸಿದರು.

add - BDG

Related Posts

Leave a Reply

Your email address will not be published.