ಮಂಗಳೂರು :ದೀಪಾವಳಿಯಲ್ಲಿ ಅಗ್ನಿಗೆ ವಿಶೇಷ ಸ್ಥಾನವಿದೆ-ಮಂಗಳೂರು ವಿಭಾಗ ಕಾರ್ಯವಾಹ ವಾದಿರಾಜ್ ಅಭಿಪ್ರಾಯ

ದೀಪವು ಮನೆ ಮತ್ತು ಬದುಕನ್ನು ಬೆಳಗುತ್ತದೆ. ದೀಪಾವಳಿಯಲ್ಲಿ ಅಗ್ನಿಗೆ ವಿಶೇಷ ಸ್ಥಾನವಿದ್ದು, ಪಂಚಭೂತಗಳಲ್ಲಿ ಒಂದಾಗಿರುವ ಅಗ್ನಿಯೂ ಕೆಟ್ಟದನ್ನು ಭಸ್ಮಗೊಳಿಸಿ, ಸುಂದರ ಜೀವನ ರೂಪಿಸಲು ಸಹಕಾರಿ ಎಂದು ಮಂಗಳೂರು ವಿಭಾಗ ಕಾರ್ಯವಾಹ ವಾದಿರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು

ಅವರು ಭಾನುವಾರ ಸಂಜೆ ರಾಷ್ಟಿ್ಯ ಸ್ವಯಂ ಸೇವಕ ಸಂಘದ ವತಿಯಿಂದ ಕಂದಾವರ ಪ್ರಿಯಾಂಕ ನಗರದ ಸೇವಾ ಬಸ್ತಿಯ ನಾಗರಿಕರಿಗೆ ದೀಪಾವಳಿ ಹಿಂದಿನ ದಿನದ ನೀರು ತುಂಬಿಸುವ ಕಾರ್ಯಕ್ರಮಕ್ಕೆ ದೇವಸ್ಥಾನದ ಅರ್ಚಕರಿಂದ ಪೂಜಿಸಲ್ಪಟ್ಟ ಗಂಗಾ ಜಲ ಮತ್ತು ದೀಪವನ್ನು ನೀಡಿ ಶುಭ ಕೋರಿ ಮಾತನಾಡಿದರುಪಂಚಭೂತಗಳ ಹಿಂದಿರುವ ಶಕ್ತಿ ಅಗ್ನಿ. ಹವಿಸ್ಸನ್ನು ಅಗ್ನಿಗೆ ನೀಡುವುದರ ಮೂಲಕ ದೇವರಿಗೆ ಸಮರ್ಪಿಸಲಾಗುತ್ತದೆ. ಈ ಸಮಾಜದವು ಒಂದು ಕುಟುಂಬ, ದೇಶವೇ ಕುಟುಂಬ, ಭೂಮಿಯೇ ಒಂದು ಕುಟುಂಬ ಎಂದು ಅಗ್ನಿಯೂ ಸಂದೇಶ ಸಾರುತ್ತದೆ ಎಂದರು

ಸಾವಿರಾರು ವರ್ಷಗಳಿಂದ ಈ ದೇಶದ ಮೇಲೆ ಅನೇಕರು ದಾಳಿ ನಡೆಸಿದ್ದಾರೆ. ಪ್ರಪಂಚದಲ್ಲಿ ಭಾರತದ ಮೇಲೆ ಆದಷ್ಟು ದಾಳಿಗಳು ಇನ್ಯಾವ ದೇಶಕ್ಕೂ ಆಗಿಲ್ಲ. ಜಗ್ಗತ್ತಿನಲ್ಲಿ 45 ಸಂಸ್ಕತಿಗಳು ಇವೆ. ಆದರೆ ಇಂದು ಅದ್ಯಾವ ಸಂಸ್ಕೃತಿಗಳು ಉಳಿದಿಲ್ಲ, ಹಿಂದು ಸಂಸ್ಕೃತಿ ಉಳಿದೆ. ನಮ್ಮ ಮನೆಗಳಲ್ಲಿ, ಪರಂಪರೆ, ಆಚರಣೆಯನ್ನು ಕಾಪಾಡಿಕೊಂಡು ಪಾಲಿಸುತ್ತಿರುವುದರಿಂದ ಭಾರತ ದೇಶ ಜೀವಂತವಾಗಿದೆ. ಹಿಂದು ಸಂಸ್ಕöÈತಿಯಲ್ಲಿ ಜೀವನ ಪದ್ದತಿಯಲ್ಲಿ ವಿವಿಧತೆ ಇದೆ. ಈ ಆಚಾರ ಪದ್ದತಿಗಳಿಂದ ನಮ್ಮ ಸಂಸ್ಕೃತಿ ಭದ್ರವಾಗಿದೆ ಎಂದರು

ಈ ಸಂದರ್ಭದಲ್ಲಿ ಆರ್.ಎಸ್.ಎಸ್. ನ ತಾಲೂಕು ಸೇವಾ ಪ್ರಮುಖ್ ಮುರುಳೀಧರ, ಕುಂದಾಪುರ ತಾ.ಸಂಘ ಚಾಲಕ್ ಸತೀಶ್ಚಂದ್ರ, ಬಸ್ರೂರು ನಗರ ಕಾರ್ಯವಾಹ ಪ್ರದೀಪ್, ಸ್ವಯಂಸೇವಕರಾದ ರಾಜೇಶ್ ಕಾವೇರಿ, ರಾಕೇಶ್, ಭಜರಂಗದಳ ಮುಖಂಡ ಸುಧೀರ್ ಮೆರ್ಡಿ ಉಪಸ್ಥಿತರಿದ್ದರು.
