ಮೂಡುಬಿದರೆ : ಶಿರ್ತಾಡಿಯಲ್ಲಿ 25ನೇ ವರ್ಷದ ಗುರುಪೂಜೆ, ಬೃಹತ್ ಶೋಭಾಯಾತ್ರೆ

ಮೂಡುಬಿದಿರೆ : ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ (ರಿ), ಶಿರ್ತಾಡಿ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಮಹಿಳಾ ಘಟಕ ಶಿರ್ತಾಡಿ ಇವುಗಳ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣಗುರುಗಳ 168ನೇ ಗುರುಜಯಂತಿ ಆಚರಣಿಯ ಪ್ರಯುಕ್ತ 25ನೇ ವರ್ಷದ ಗುರುಪೂಜೆ ಮತ್ತು ಬೃಹತ್ ಶೋಭಾಯಾತ್ರೆಯು ಭಾನುವಾರ ಶಿರ್ತಾಡಿಯಲ್ಲಿ ನಡೆಯಿತು.

grupooje

ಗುರುಪೂಜೆಯ ಪ್ರಯುಕ್ತ ಬ್ರಹ್ಮ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ (ರಿ), ಶಿರ್ತಾಡಿ ಇಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿ ಮಾತನಾಡಿ ನಾವು ಇಂದು ಜಾತಿ ಸಂಘಗಳಲ್ಲಿ ಸಂಘಟಿತರಾಗಿದ್ದೇವೆ. ನಾರಾಯಣಗುರುಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ಕರೆ ನೀಡಿದ್ದರು. ಅವರನ್ನು ಮಾರ್ಗದರ್ಶಿಯಾಗಿ ಇಟ್ಟುಕೊಂಡು ಹಿಂದುಳಿದ ಸಮಾಜದ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ನೀಡುವ ಉದ್ದೇಶದಿಂದ ನಾರಾಯಣ ಗುರುಗಳ ಹೆಸರಿನಲ್ಲಿ ತಮ್ಮ ಇಲಾಖೆಯ ವತಿಯಿಂದ ರಾಜ್ಯದಲ್ಲಿ 4 ವಸತಿ ಶಾಲೆಗಳನ್ನು ತೆರೆಯಲಾಗಿದ್ದು ಇನ್ನಷ್ಟು ಶಾಲೆಗಳನ್ನು ತೆರೆಯುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಅವಳಿ ವೀರರಾದ ಕೋಟಿ-ಚೆನ್ನಯರ ಹೆಸರಿನಲ್ಲಿ ಉಡುಪಿಯಲ್ಲಿ ಸೈನಿಕ ಶಾಲೆಯನ್ನು ತೆರೆಯಲಾಗಿದೆ. ಬಿಲ್ಲವ ಸಹಿತ ಇತರ ಹಿಂದುಳಿದ ವರ್ಗದವರನ್ನು ಒಗ್ಗೂಡಿಸುವಂತಹ ಪ್ರಯತ್ನವನ್ನು ಮಾಡಲಾಗುತ್ತಿದೆ. ಬಿಲ್ಲವರ ಅಭಿವೃದ್ಧಿಗೆ ಮತ್ತು ನಾರಾಯಣ ಗುರುಗಳ ಹೆಸರಿನಲ್ಲಿ ಮಾಡುವ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ ಎಂದ ಅವರು ಶಿರ್ತಾಡಿಯ ನಾರಾಯಣ ಗುರುಗಳ ಸಭಾಭವನದ ಅಭಿವೃದ್ಧಿಗೆ ಅನುದಾನವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.


ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜಾತಿ ಸಂಘಟನೆಗಳು ನಮ್ಮ ಸಮಾಜವನ್ನು ಒಂದುಗೂಡಿಸಲು ಇರಬೇಕು ಹೊರತು ಇನ್ನೊಂದು ಜಾತಿ ಸಂಘಟನೆಯ ಜತೆ ಪೈಪೋಟಿ ಮಾಡಲು ಅಲ್ಲ. ಜಿಲ್ಲವರು ನಾರಾಯಣ ಗುರುಗಳ ಸಂದೇಶವನ್ನು ಚಾಚು ತಪ್ಪದೆ ಮೈಗೂಡಿಸಿಕೊಳ್ಳುವವರಾಗಿರಬೇಕು. ಜಾತಿ ಸಂಘಟನೆಗಳು ತೊಂದರೆಯಲ್ಲಿರುವ ಅಸಹಾಯಕರಿಗೆ ಸಹಾಯ ಮಾಡುವ ಉದ್ದೇಶಗಳನ್ನು ಹೊಂದಿರಬೇಕು. ಮತ್ತು ಇತರ ಎಲ್ಲಾ ಸಮಾಜದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸವನ್ನು ಮಾಡಬೇಕಾಗಿದೆ ಎಂದ ಅವರು ಇಲ್ಲಿ ಸುಸಜ್ಜಿತವಾದ ಸಮುದಾಯ ಭವನದ ನಿರ್ಮಾಣಕ್ಕೆ ಮನವಿಯನ್ನು ಮಾಡಿದ್ದೀರಿ ಖಂಡಿತಾವಾಗಿಯೂ ಈ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ (ರಿ), ಶಿರ್ತಾಡಿ ಇದರ ಅಧ್ಯಕ್ಷ ಅಶೋಕ್ ಮಾಂಟ್ರಾಡಿ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಬೆಂಗಳೂರು ಕಿಯೋನಿಕ್ಸ್ನ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ನಿ. ಇದರ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ (ರಿ), ಶಿರ್ತಾಡಿ ಇದರ ಗೌರವಾಧ್ಯಕ್ಷ ಲಕ್ಮಣ್ ವಿ.ಕೋಟ್ಯಾನ್, ಶಿರ್ತಾಡಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕೋಟ್ಯಾನ್, ವಾಲ್ಪಾಡಿ ಗ್ರಾ.ಪಂ.ಅಧ್ಯಕ್ಷ ಪ್ರದೀಪ್ ಕುಮಾರ್, ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಮಹಿಳಾ ಘಟಕದ ಅಧ್ಯಕ್ಷ ರೇಖಾ ಸಾಲ್ಯಾನ್ ಉಪಸ್ಥಿತರಿದ್ದರು.

gru pooje

ಸನ್ಮಾನ : ಬಿಲ್ಲವ ಸಮಿತಿಯ ಸ್ಥಾಪಕಾಧ್ಯಕ್ಷ ಗೋಪಿನಾಥ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರುಗಳಾದ ಲಕ್ಷ÷್ಮಣ್ ಕೋಟ್ಯಾನ್, ಸುಕನ್ಯಾ, ಅನ್ನದಾನದ ಸೇವಾರ್ಥಿಗಳಿಗೆ, ಸಂಘದ ಅಭಿವೃದ್ಧಿಗೆ ಅತೀ ಹೆಚ್ಚು ಲಕ್ಕಿಡಿಪ್ ಮಾರಾಟ ಮಾಡಿರುವ ಹರೀಶ್ಚಂದ್ರ ಕೆ.ಸಿ. ಮತ್ತು ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಸಾಲ್ಯಾನ್, ಮಹಾ ಪೋಷಕರನ್ನು ಮತ್ತು ದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಿತಿಯ ಗೌರವ ಸಲಹೆಗಾರ ರುಕ್ಕಯ್ಯ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ಕುಶಲ್ ಕುಮಾರ್ ಹೌದಲ್ ವರದಿ ವಾಚಿಸಿದರು. ವಾಲ್ಪಾಡಿ ಗ್ರಾ.ಪಂ.ಸದಸ್ಯ ಗಣೇಶ್ ಜಿ.ಆ ಆಯೂರು ಕಾರ್ಯಕ್ರಮ ನಿರೂಪಿಸಿದರು. ಸಂಪತ್ ಎಸ್. ಬಂಗೇರ ವಂದಿಸಿದರು.
ಶ್ರೀ ಕ್ಷೇತ್ರ ಕಂದೀರು ಇದರ ಆಡಳಿತ ಮೊಕ್ತೇಸರ ಸೋಮನಾಥ ಶಾಂತಿ ಅವರ ಪೌರೋಹಿತ್ಯದಲ್ಲಿ ಗುರುಪೂಜೆ ನಡೆಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಹಿತ ಪ್ರಮುಖರು ಭಾಗವಹಿಸಿದ್ದರು.

ಶೋಭಾಯಾತ್ರ : ಕೋಟಿ-ಚೆನ್ನಯ ಯುವಶಕ್ತಿ ಅಳಿಯೂರು ಇದರ ಸ್ಥಾಪಕಾಧ್ಯಕ್ಷ ಹನ್ನೇರು ವಿಶ್ವನಾಥ ಕೋಟ್ಯಾನ್ ಅವರ ಸಾರಥ್ಯದಲ್ಲಿ ಶಿರ್ತಾಡಿ ಬಸ್ ನಿಲ್ದಾಣದಿಂದ ಸಂಘದ ವರೆಗೆ ನಡೆದ ಶೋಭಾಯಾತ್ರೆಗೆ ಬೆಳುವಾಯಿ ಸಿ.ಎ.ಬ್ಯಾಂಕಿನ ಅಧ್ಯಕ್ಷ ಭಾಸ್ಕ ಎಸ್.ಕೋಟ್ಯಾನ್ ಚಾಲನೆ ನೀಡಿದರು.

ಅರುಣಾನಂದ ಸ್ವಾಮೀಜಿ, ಕುದ್ರೋಳ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಶಶಿಕಾಂತ್ ಸುವರ್ಣ, ಪ್ರವೀಣ್ ಭಟ್ ಕಾನಂಗಿ, ಹವಾ ಸಭಾಭವನದ ಮಾಲಕರು ಕೆ.ಕ ಪೂಜಾರಿ ಹೇಮಾವತಿ ದಂಪತಿ, ಬ್ರಹ್ಮ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ (ರಿ), ಮೂಡುಬಿದಿರೆ ಇದರ ಮಾಜಿ ಅಧ್ಯಕ್ಷ ಪಿ.ಕೆ.ರಾಜು ಪೂಜಾರಿ, ಹೊಸಂಗಡಿ ಗ್ರಾಪಂ ನ ಅಧ್ಯಕ್ಷ ಹರಿಪ್ರಸಾದ್, ಹಿಂ ಜಾ ವೇಯ ಜಿಲ್ಲಾ ಸಹಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಈ ಸಂದರ್ಭದಲ್ಲಿದ್ದರು. ವಿದ್ಯಾಗಣವತಿ ಅಳಿಯೂರು, ಪರಶುರಾಮ ಬೋರುಗುಡ್ಡ, ಮಹಾಲಿಂಗೇಶ್ವರ ಆರ್ಜುನಾ ಮರ, ಮರೋಡಿ ಹಾಗೂ ಶನೀಶ್ವರ ಭಜನಾ ತಂಡಗಳು, ಯಕ್ಷ ಸಹಿತ ವಿವಿಧ ವೇಷದಾರಿಗಳು, ಪೂರ್ಣಕುಂಭ ಹಿಡಿದ ಮಹಿಳೆಯರ ತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

KANACHUR

Related Posts

Leave a Reply

Your email address will not be published.