ಇ-ಖಾತಾ ನೀಡಿಕೆ ಸರಳೀಕರಣ : ಮೇಯರ್ ಪ್ರೇಮಾನಂದ ಶೆಟ್ಟಿ

ಮಂಗಳೂರು ಮಹಾನಗರ ಪಾಲಿಕೆ ಆನ್‍ಲೈನ್ ನಲ್ಲಿ ಉದ್ದಿಮೆ ಪರವಾನಿಗೆ, ಆಸ್ತಿ ತೆರಿಗೆ ಆರಂಭಿಸಿದ ಬಳಿಕ ಇ-ಖಾತಾ ನೀಡಿಕೆಯನ್ನು ಡಿಎಂಡಿಎಸ್‍ನಿಂದ ಇ-ಗವರ್ನೆನ್ಸ್‍ಗೆ ವರ್ಗಾಯಿಸಿ ಇನ್ನಷ್ಟು ಸರಳೀಕರಣ ಮಾಡಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು. 2020ರಲ್ಲಿ ಜಾರಿಗೆ ಬಂದ ಇ-ಖಾತಾದಲ್ಲಿ ಕೆಲವೊಂದು ತಾಂತ್ರಿಕ ಆಡಚಣೆ ಹಿನ್ನೆಲೆಯಲ್ಲಿ ಖಾತಾ ನೀಡುವಲ್ಲಿ ವಿಳಂಬವಾಗಿತ್ತು. ಆದರೂ ಈಗಾಗಲೇ 23000 ಇ_ಖಾತಾಗಳನ್ನು ವಿತರಿಸಿ ರಾಜ್ಯದ ಪಾಲಿಕೆಗಳಲ್ಲಿ ಮಂಗಳೂರು ಪ್ರಥಮ ಸ್ಥಾನದಲ್ಲಿದೆ ಎಂದರು. ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ಹೊಸ ತಂತ್ರಾಂಶವು ಬಳಕೆದಾರರ ಸ್ನೇಹಿಯಾಗಿದ್ದು ತಮ್ಮ ಮೊಬೈಲ್ ಮೂಲಕವೂ ಅರ್ಜಿಯೊಂದಿಗೆ ತಮ್ಮ ಜಾಗದ ಆಸ್ತಿಗೆ ಸಂಬಂಧಪಟ್ಟಂತೆ ಮಾಹಿತಿ ಅಪ್‍ಲೋಡ್ ಮಾಡಿ ಖಾತಾ ಪಡೆಯಬಹುದು. ಇ-ಆಸ್ತಿ ಸಾಪ್ಟವೇರ್ ತಂತ್ರಾಂಶ ಆಪ್ ಮೂಲಕ ಸಿದ್ಧಪಡಿಸಲಾದ ಮಾಹಿತಿಯನ್ನು ಸೇವಾ ಕೇಂದ್ರಕ್ಕೆ ಸಲ್ಲಿಸಿ ಖಾತಾ ಪಡೆಯಲು ಸಹಕರಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.