ಎಡಪಂಥೀಯ ಚಿಂತಕ ಐ.ಎ.ಪ್ರಸನ್ನ ನಿಧನ

ಎಡಪಂಥೀಯ ಚಿಂತಕರೂ, ಪ್ರಗತಿಪರ ಚಿಂತಕರ ವೇದಿಕೆಯ ಅಧ್ಯಕ್ಷರೂ,ಜಿಲ್ಲಾ ವಿಚಾರವಾದಿ ವೇದಿಕೆ ಹಾಗೂ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸಕ್ರಿಯ ಸದಸ್ಯರೂ,ಮೆಸ್ಕಾಂನ ನಿವ್ರತ್ತ ಹಿರಿಯ ಅಧಿಕಾರಿಗಳಾದ ಐ.ಎ.ಪ್ರಸನ್ನ (80ವರ್ಷ)ರವರು ಇಂದು(21-09-2022)ಅಲ್ಪ ಕಾಲದ ಅಸೌಖ್ಯದಿಂದಾಗಿ ನಗರದ ಖಾಸಗೀ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಎಳೆಯ ಪ್ರಾಯದಲ್ಲೇ ಎಡಪಂಥೀಯ ಚಿಂತನೆಯಿಂದ ಪ್ರಭಾವಿತರಾದ ಪ್ರಸನ್ನರವರು, ತನ್ನ ವಿದ್ಯಾರ್ಥಿ ಜೀವನದಲ್ಲಿ ಪ್ರಗತಿಪರ ವಿಧ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು. ಯೌವನಾವಸ್ಥೆಯಲ್ಲಿಯೂ ಜನಪರವಾಗಿ ಚಿಂತಿಸುತ್ತಾ, ಜನರ ಹೋರಾಟಗಳಲ್ಲಿಯೂ ಭಾಗವಹಿಸುತ್ತಿದ್ದರು. ದುಡಿಯುವ ವರ್ಗದ ಸಿದ್ದಾಂತವನ್ನು ಮೈಗೂಡಿಸಿಕೊಂಡು ಕಾರ್ಮಿಕರ ಅನೇಕ ಹೋರಾಟಗಳನ್ನು ಬೆಂಬಲಿಸುತ್ತಿದ್ದರು.ವಿದ್ಯಾರ್ಥಿ ಯುವಜನರ ಚಳುವಳಿಯ ಬೆಳವಣಿಗೆಗೆ ಸದಾ ಹಂಬಲಿಸುತ್ತಿದ್ದರು.ಮೆಸ್ಕಾಂನಲ್ಲಿ ಹಿರಿಯ ಅಧಿಕಾರಿಗಳಾಗಿ ಸುಮಾರು 35 ವರ್ಷಗಳಿಂದ ಸೇವೆಯನ್ನು ಸಲ್ಲಿಸಿ ಅತ್ಯಂತ ಪ್ರೀತಿಪಾತ್ರರಾದ ಅಧಿಕಾರಿಗಳೆಂದು ಜನಮನ್ನಣೆ ಪಡೆದಿದ್ದರು.ಸೇವೆಯಿಂದ ನಿವ್ರತ್ತರಾದ ಬಳಿಕ ಪ್ರಗತಿಪರ ಚಿಂತಕರ ವೇದಿಕೆಯ ಅಧ್ಯಕ್ಷರಾಗಿ ಮಂಗಳೂರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಗತಿಪರ ಜಾತ್ಯಾತೀತ ಮಾನವೀಯ ಮನಸ್ಸಿನ ನೂರಾರು ಜನರನ್ನು ಒಟ್ಟು ಸೇರಿಸುವ ಮೂಲಕ ಜನತೆಯ ಪ್ರೀತಿ ವಿಶ್ವಾಸವನ್ನು ಗಳಿಸಿದ್ದರು.ಇಂತಹ ವ್ಯಕ್ತಿತ್ವದ ಪ್ರಸನ್ನರವರ ಅಗಲುವಿಕೆ ದ.ಕ.ಜಿಲ್ಲೆಯ ಎಡಪಂಥೀಯ ಚಳುವಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಗತಿಪರ ಚಿಂತಕರ ವೇದಿಕೆಯು ತನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ. ಪ್ರಸನ್ನರವರ ನಿಧನಕ್ಕೆ CPIM,CITU,DYFI,SFI,JMS ಸಂಘಟನೆಗಳೂ ಕೂಡ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ .

Related Posts

Leave a Reply

Your email address will not be published.