HomeFresh Newsವಿಟ್ಲ :ಜಲ್ಲಿ ಸಾಗಾಟದ ಲಾರಿ ಪಲ್ಟಿ,ಇರ್ವರಿಗೆ ಗಾಯ

ವಿಟ್ಲ :ಜಲ್ಲಿ ಸಾಗಾಟದ ಲಾರಿ ಪಲ್ಟಿ,ಇರ್ವರಿಗೆ ಗಾಯ

ವಿಟ್ಲ: ಜಲ್ಲಿ ಸಾಗಾಟ ಲಾರಿಯೊಂದು ಪಲ್ಟಿಯಾಗಿ ಚಾಲಕನಿಗೆ ಗಾಯವಾದ ಘಟನೆ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ನಡೆದಿದೆ. ಘಟನೆಯಿಂದಾಗಿ ಟಿಪ್ಪರ್ ಚಾಲಕನಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಯಿಂದಾಗಿ ಅಲ್ಪ ಹೊತ್ತು ರಸ್ತೆ ಸಂಚಾರ ವ್ಯತ್ಯಯವಾಗಿದೆ.

ಟಿಪ್ಪರ್ ಪಲ್ಟಿಯಾಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲೆಲ್ಲಾ ಜಲ್ಲಿಕಲ್ಲುಗಳು ಚೆಲ್ಲಿ ಹೋಗಿದ್ದು ಬಳಿಕ ಅದನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಆರಂಭಗೊಂಡಿತು. ಹೊಯ್ಸಳ ವಾಹನದಲ್ಲಿ ಗಸ್ತುನಿರತರಾಗಿದ್ದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments