ಮಂಗಳೂರು : ಸ್ಮಾರ್ಟ್‍ಸಿಟಿಯ ಹೊಂಡ ಮುಚ್ಚಿದ ಸಂಚಾರ ಪೊಲೀಸ್

ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ರಾವ್ & ರಾವ್ ಸರ್ಕಲ್‍ನಲ್ಲಿ ನಡೆದ ಕಾಮಗಾರಿಯ ಮಧ್ಯೆಯೂ ಕಾಣಿಸಿಕೊಂಡ ಹೊಂಡವನ್ನು ಕರ್ತವ್ಯ ನಿರತ ಸಂಚಾರ ಪೊಲೀಸ್ ಕಾನ್‍ಸ್ಟೇಬಲ್ ಶರಣಪ್ಪ ಸಾರ್ವಜನಿಕರ ಸಹಕಾರದಲ್ಲಿ ಕಲ್ಲು ಹಾಕಿ ಮುಚ್ಚಿ ಗಮನ ಸೆಳೆದಿದ್ದಾರೆ. ಕೆಲವು ಸಮಯದಿಂದ ಈ ಪ್ರಮುಖ ರಸ್ತೆಯಲ್ಲಿ ಹೊಂಡ ಉಂಟಾಗಿತ್ತು. ಇದರಿಂದ ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ಸಾಕಷ್ಟು ತೊಂದರೆ ಎದುರಿಸುತ್ತಿದ್ದರು. ಇದನ್ನು ಗಮನಿಸಿದ ಶರಣಪ್ಪ ಸ್ಥಳೀಯ ಆಟೋ ಚಾಲಕರು, ಸಾರ್ವಜನಿಕರ ಜತೆ ಸೇರಿ ಹೊಂಡ ಮುಚ್ಚಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಶರಣಪ್ಪ ಅವರ ಸಾಮಾಜಿಕ ಕಳಕಳಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಹಾಗೂ ಸಾರ್ವಜನಿಕ ವಲಯದಲ್ಲಿ ತುಂಬಾ ಮೆಚ್ಚುಗೆ ವ್ಯಕ್ತವಾಗಿದೆ.

Related Posts

Leave a Reply

Your email address will not be published.