ಶ್ರೀಕ್ಷೇತ್ರ ಬಿಬಿಲಚ್ಚಿಲ್ : 108 ದಿನಗಳ ಸಂಧ್ಯಾ ಭಜನಾ ಕಾರ್ಯಕ್ರಮ


ಮಂಗಳೂರಿನ ಅದ್ಯಪಾಡಿ ಶ್ರೀಕ್ಷೇತ್ರ ಬಿಬಿಲಚ್ಚಿಲ್ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮ ಕಲಶೋತ್ಸವ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಪ್ರಯುಕ್ತ ನಡೆಯುತ್ತಿರುವ 108 ದಿನಗಳ ಸಂದ್ಯಾ ಭಜನೆಯು ನಡೆಯುತ್ತಿದ್ದೂ ನಿನ್ನೆ ಶ್ರೀ ಬಾಲ ವಿಠೋಭಾ ಭಜನಾ ಮಂಡಳಿ ಪಲ್ಲಿಪಾಡಿ ಕರಿಯಂಗಳ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಈಗಾಗಲೇ ಹಲವಾರು ಭಜನಾ ತಂಡಗಳು ನೋಂದಣಿ ಮಾಡಿಸಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಜನಾ ತಂಡ ಪಾಲ್ಗೊಳ್ಳುವಂತೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮಂಡಳಿಯವರು ತಿಳಿಸಿದ್ದಾರೆ.


ಇನ್ನು ಹೆಚ್ಚಿನ ಮಾಹಿತಿಗಾಗಿ ರಾಜೇಶ್ ಅವರ 9880054343 ಅವರ ಮುಖೇನ ನೋಂದಣಿ ಮಾಡಿಕೊಳ್ಳಬಹುದು.
