ಆಟೋ ರಿಕ್ಷಾಗಳ ಕಲರ್ ಕೋಡಿಂಗ್ ಆದೇಶ ಜಾರಿಯಾಗಬೇಕು : ಆಟೋರಿಕ್ಷಾ ಚಾಲಕ ಮಾಲಕ ಸಂಘದ ವಿಷ್ಣುಮೂರ್ತಿ ಭಟ್ ಆಗ್ರಹ

ಮಂಗಳೂರು ನಗರ ಮತ್ತು ಗ್ರಾಮಾಂತರ ಆಟೋ ರಿಕ್ಷಾಗಳ ಕಲರ್ ಕೋಡಿಂಗ್ ಆದೇಶ ಕೂಡಲೇ ಜಾರಿಯಾಗಬೇಕು. ರಿಕ್ಷಾ ಪಾರ್ಕ್‍ಗಳ ನೋಂದಾವಣಿಗೆ ವಿಳಂಬ ಮಾಡುತ್ತಿರುವುದು ಯಾಕೆ ಮತ್ತು ನಗರದೊಳಗೆ ಗ್ರಾಮಾಂತರ ರಿಕ್ಷಾಗಳ ಅಕ್ರಮ ಸಂಚಾರ ಮಾಡಿ ಬಾಡಿಗೆ ಮಾಡುವುದನ್ನು ನಿಲ್ಲಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಆಟೋ ಚಾಲಕ ಮಾಲಕರ ಸಂಘಟಗಳ ಒಕ್ಕೂಟದ ಗೌರವಾಧ್ಯಕ್ಷರಾದ ವಿಷ್ಣುಮೂರ್ತಿ ಭಟ್ ಆಗ್ರಹಿಸಿದ್ದಾರೆ.

ಅವರು ನಗರದ ಪ್ರೆಸ್‍ಕ್ಲಬ್‍ದಲ್ಲಿ ಸುದ್ದಿಗೋಷ್ಟಿಯಲ್ಲಿ ನಡೆಸಿ ಮಾತನಾಡಿದರು. ನಾಲ್ಕು ತಿಂಗಳು ಕಳೆದರೂ ಈಗಾಗಲೇ ಎಲ್ಲಾ ಇಲಾಖೆಗಳಿಂದ ಒಪ್ಪಿಗೆ ಪಡೆದ ಸುಮಾರು 210 ಆಟೋ ರಿಕ್ಷಾ ಪಾರ್ಕ್‍ಗಳ ನೋಂದಣಿ ಮಾಡದ ಮಾನಗರ ಪಾಲಿಕೆಯ ವಿಳಂಬ ನೀತಿಯನ್ನು ಖಂಡಿಸಿ ಶೀಘ್ರ ಜಾರಿಗೆ ಮಾಡುವಂತೆ ಒತ್ತಾಯಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ಮನವಿಗೆ ಸೂಕ್ತ ಸಮಯದಲ್ಲಿ ಸ್ಪಂದಿಸಿ ರಿಕ್ಷಾ ಮೀಟರ್ ದರ ಮರುಪರಿಶೀಲನೆ ಮಾಡಿಸಿಕೊಟ್ಟ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಬೋಳಾರ, ಅಬೂಬಕ್ಕರ್ ಸುರತ್ಕಲ್, ಭರತ್ ಕುಮಾರ್, ಲೋಕೇಶ್ ಶೆಟ್ಟಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.