ಮಂಜೇಶ್ವರ: ಕುಂಬಳೆಯಲ್ಲಿ ಕಾರು ಅಪಘಾತ : ಮಹಿಳೆ ಸಾವು

ಮಂಜೇಶ್ವರ: ಸೋಮವಾರ ಮಧ್ಯಾಹ್ನ ಮಟ್ಟಂ ಶಿರಿಯಾ ಬಳಿ ನಡೆದ ವಾಹನ ಅಪಘಾತದಲ್ಲಿ ಗಾಯಗೊಂಡ 62 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ
ಕಾಇಾಂಗಾಡಿನ ಕೊವ್ವಲ್ಪಳ್ಳಿ ಮಾನ್ಯಾಟ ವಿಷ್ಣುಮೂರ್ತಿ ದೇವಸ್ಥಾನದ ಬಳಿ ನಿವಾಸಿ ನಫೀಸ (62) ಸಾವನ್ನಪ್ಪಿದ ದುರ್ದೈವಿ. ಅಪಘಾತದಲ್ಲಿ ತೀವ್ರ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಇತರ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಅಳಿಯನ ತಂದೆಯನ್ನು ಭೇಟಿಯಾಗಿ ಸಂಬಂಧಿಕರೊಂದಿಗೆ ವಾಪಸ್ ಬರುತ್ತಿರುವ ದಾರಿ ಮಧ್ಯೆ ಕುಂಬಳ ಶಿರಿಯಾ ಸಮೀಪ ಅಪಘಾತ ಸಂಭವಿಸಿದೆ. ನಫೀಸ ಅವರು ದಿವಂಗತ ಅಬೂಬಕ್ಕರ್ ಎಂಬವರಿ ಪತ್ನಿಯಾಗಿದ್ದಾರೆ..
