ಮಂಜೇಶ್ವರ : ಜ.19ರಿಂದ ಜ.24ರವರೆಗೆ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ
ಮಂಜೇಶ್ವರ ಕುಳೂರು ಸಂತಡ್ಕದ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.19ರಿಂದ ಜ.24ರವರೆಗೆ ನಡೆಯಲಿದೆ.
ಜ.19ರಿಂದ ಜ.22ರವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಜ.23, 24ರಂದುವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ.
ಜ.16ರಂದು ಗೊನೆಮುಹೂರ್ತ, ಜ.19ರಂದು ಹೊರೆಕಾಣೀಕೆ ಮೆರವಣಿಗೆ, ಧಾರ್ಮಿಕ ಸಭೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ಕಾರ್ಯಕ್ರಮ, ಜ.20ರಂದು ಸಮಗ್ರ ಭೀಷ್ಮ ಯಕ್ಷಗಾನ ಬಯಲಾಟ, ಜ.21ರಂದು ಶ್ರೀ ದೈವಗಳ ಭಂಡಾರ ಆಗಮನ, ಬಿಂಬ ಶುದ್ದಿ ಕಲಶ, ಯಕ್ಷಗಾಣ ತಾಳಮದ್ದಳೆ, ಮಾತೃ ಸಂಗಮ ಹಾಗೂ ಏರ್‍ಲಾ ಗ್ರಾರಂಟಿ ಅತ್ತ್ ನಾಟಕ , ಜ.22 ರಂದು ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕವು ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಯಲಿದೆ.
ಜ.23ರಂದು ಶ್ರೀ ಅರಸು ಸಂಕಲ ಅಣ್ಣ ದೈವಗಳ ನೇಮೋತ್ಸವ, ಮತ್ತು 24ರಂದು ಬೆಳಿಗ್ಗೆ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ, ಸಂಜೆ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ, ಶ್ರೀ ಕೊರತಿ ಗುಳಿಗ ದೈವಗಳ ಕೋಲೋತ್ಸವವು ನಡೆಯಲಿದೆ.