HomeFresh Newsಮಂಜೇಶ್ವರ : ನೀರಿನ ಕೊಳಕ್ಕೆ ಬಿದ್ದು ಯುವಕರಿಬ್ಬರು ಮೃತ್ಯು

ಮಂಜೇಶ್ವರ : ನೀರಿನ ಕೊಳಕ್ಕೆ ಬಿದ್ದು ಯುವಕರಿಬ್ಬರು ಮೃತ್ಯು

ಪೆರ್ನಾಳ್ ಹಬ್ಬ ಆಚರಿಸಲೆಂದು ಸಂಬಂಧಿಕರ ಮನೆಗೆ ಬಂದಿದ್ದ ಯುವಕರಿಬ್ಬರು ಮಸೀದಿಯ ಸಮೀಪದ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೊಗ್ರಾಲ್ ಕೊಪ್ಪಳದಲ್ಲಿ ಶನಿವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಮಂಜೇಶ್ವರ ಮಜಿಬೈಲ್ ನಿವಾಸಿ ಖಾದರ್ – ನಸೀಮಾ ದಂಪತಿಗಳ ಮಕ್ಕಳಾದ ಅಬ್ದುಲ್ ನಾಝಿಂ (22) ಹಾಗೂ ಮೊಹಮ್ಮದ್ ನವಾ (17) ಮೃತ ದುರ್ದೈವಿಗಳು. ಸ್ಥಳಕ್ಕಾಗಮಿಸಿದ ಸ್ಥಳೀಯರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಾಹಿತಿ ಪಡೆದ ಕುಂಬಳೆ ಪೆÇಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments