ಮಂಜೇಶ್ವರ : ಎಲ್‌ಡಿಎಫ್ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ

ಮಂಜೇಶ್ವರ: ಮಂಗಲ್ಪಾಡಿ ಗ್ರಾಮ ಪಂ. ವ್ಯಾಪ್ತಿಯ ಸಾರ್ವಜನಿಕ ಸ್ಥಳ, ಶಾಲಾ ಮದ್ರಸ ಪರಿಸರ ಸೇರಿದಂತೆ ಕಳೆದೆರಡು ವರ್ಷಗಳಿಂದ ರಾಶಿ ಬಿದ್ದು ಗುಬ್ಬೆದ್ದು ನಾರುತ್ತಿರುವ ತ್ಯಾಜ್ಯ ಗಳ ಹಾಗೂ ಆಡಳಿತ ಸಮಿತಿಯ ಬ್ರಷ್ಟಾಚಾರದ ವಿರುದ್ಧ ಎಲ್ ಡಿ ಎಫ್ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಮಂಗಲ್ಪಾಡಿ ಪಂ. ಮುಂಬಾಗದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಿತು.

protest

ಪಂಚಾಯತು ಕಚೇರಿ ಮುಂಬಾಗದಲ್ಲಿ ನಡೆದ ಧರಣಿ ಸತ್ಯಾಗ್ರಹಕ್ಕೆ ಸಿಪಿಐಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ ವಿ ಕುಂಞ ರಾಮನ್ ಚಾಲನೆ ನೀಡಿದರು ದುರ್ಗಂಧ ಬೀರುತ್ತಿರುವ ತ್ಯಾಜ್ಯಗಳಿಂದಾಗಿ ಸಾಂಕ್ರಾಮಿಕ ರೋಗದ ಭೀತಿಯನ್ನು ಜನರು ಎದುರಿಸುತ್ತಿರುವಾಗ ಕಂಡೂ ಕಾಣದ ಜಾಣ ಕುರುಡರಂತೆ ವರ್ತಿಸುತ್ತಿರುವ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಾತ್ರವಲ್ಲದೆ ಆಡಳಿತ ಸಮಿತಿಯಿಂದಲೇ ಕೆಲವೊಂದು ಮಂದಿ ಅಧ್ಯಕ್ಷರನ್ನು ಬದಲಾಯಿಸಲು ಪಟ್ಟು ಹಿಡಿದಿದ್ದರು. ಪಂಚಾಯತು ಕಚೇರಿ ಮುಂಬಾಗದಲ್ಲಿ ನಡೆದ ಧರಣಿ ಸತ್ಯಾಗ್ರಹಕ್ಕೆ ಸಿಪಿಐಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ ವಿ ಕುಂಞ ರಾಮನ್ ಚಾಲನೆ ನೀಡಿದರು

ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಸಾದಿಖ್ ಚೆರುಗೋಳಿ ಅಧ್ಯಕ್ಷತೆ ವಹಿಸಿದರು. ನೇತಾರರಾದ ರಾಮಕೃಷ್ಣ ಕಡಂಬಾರ್, ರಾಘವ ಚೇರಾಲ್, ಅಹ್ಮದ್ ಅಲಿ ಕುಂಬಳೆ, ಝುಬೈರ್ ಪಡ್ಪು, ಪ್ರಕಾಶ್, ಹಮೀದ್ ಕೋಸ್ ಮೋಸ್ ಮೊದಲಾದವರು ಮಾತನಾಡಿದರು. ಧರಣಿಯಲ್ಲಿ ನೇತಾರರು ಕಾರ್ಯಕರ್ತತರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.

Related Posts

Leave a Reply

Your email address will not be published.