ತಲಪಾಡಿಯಿಂದ ಮಂಜೇಶ್ವರದ ತನಕದ ಹೆದ್ದಾರಿ
ಅಂತಿಮ ಹಂತಕ್ಕೆ ತಲುಪಿದ ಕಾಮಗಾರಿ

ಮಂಜೇಶ್ವರ: ಗಡಿಪ್ರದೇಶವಾದ ತಲಪಾಡಿಯಿಂದ ಮಂಜೇಶ್ವರ ತನಕದ ರಾ. ಹೆದ್ದಾರಿಯ ಇಕ್ಕಡೆಗಳಲ್ಲೂ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಸರ್ವೀಸ್ ರಸ್ತೆಯ ಇಕ್ಕೆಡೆಗಳಲ್ಲೂ ಕಾರ್ಯಾಚರಿಸುತ್ತಿರುವ ವ್ಯಾಪಾರ ಕೇಂದ್ರಗಳಿಗೆ ಮತ್ತು ಮನೆಗಳಿಗೆ ತೊಂದರೆಯಾಗುತ್ತಿದೆ. ಈ ರೀತಿಯಾಗಿ ತೊಂದರೆ ನೀಡುವ ಕಾಮಗಾರಿಯನ್ನು ನಿಲ್ಲಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರಾ.ಹೆದ್ದಾರಿ ಕ್ರಿಯಾ ಸಮಿತಿ ಮನವಿ ಸಲ್ಲಿಸಿದೆ.

ಉದ್ಯಾವರ 10ನೇ ಮೈಲಿನಲ್ಲಿ ವಾಸವಾಗಿರುವ ಮಹಿಳೆಗೆ ಮೊದಲು ಮನೆಗೆ ದಾರಿಯನ್ನು ನೀಡುವುದಾಗಿ ಭರವಸೆ ಕೊಟ್ಟ ಯುಎಲ್‌ಸಿಸಿ ಅಧಿಕಾರಿಗಳು ಕಾಮಗಾರಿ ಅಂತಿಮ ಹಂತಕ್ಕೆ ತಲುಪುವಾಗ ಯಾವುದೇ ವ್ಯವಸ್ಥೆಯನ್ನು ಕಲ್ಪಿಸದೆ ಕಾಮಗಾರಿಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ವಿಧವೆಯಾದ ಮಹಿಳೆ ಈಗ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

manjeshwara

ಖಾಸಗಿ ವ್ಯಕ್ತಿಗಳಿಂದ ವಶಪಡಿಸಿಕೊಂಡಿರುವ ಪ್ರದೇಶಗಳಲ್ಲಿ ಕಾಮಗಾರಿ ಆರಂಭಗೊಂಡಾಗ ವಿದ್ಯುತ್ ಕಂಬಗಳನ್ನು ಖಾಸಗಿ ವ್ಯಕ್ತಿಗಳ ಒಡೆತನದ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿರುವುದನ್ನು ತೆರವುಗೊಳಿಸದೆ ಕಾಲ್ನಡೆ ರಸ್ತೆಗೆ ಇಂಟರ್ ಲಾಕ್ ಹಾಕುವುದನ್ನು ನಿಲ್ಲಿಸಬೇಕೆಂದೂ ಅದೇ ರೀತಿ ಆರಾಧಾನಾಲಯ, ವಿದ್ಯಾಭ್ಯಾಸ ಕಟ್ಟಡಗಳು ಕಾರ್ಯಾಚರಿಸುತ್ತಿರುವ ಪ್ರದೇಶಗಳಲ್ಲಿ ವಾಹನ ಹಾಗೂ ಜನಸಂಚಾರಕ್ಕೆ ಅನುಕೂಲವಾಗುವ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಮಂಜೇಶ್ವರ ರಾ.ಹೆದ್ದಾರಿ ಕ್ರಿಯಾ ಸಮಿತಿ ಪ್ರಾಧಿಕಾರಕ್ಕೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದೆ.ಕುಂಜತ್ತೂರಿನಲ್ಲಿ ತುರ್ತು ಸಭೆ ಸೇರಿದ ಕ್ರಿಯಾ ಸಮಿತಿ ಪದಾಧಿಕಾರಿಗಳು ಇಂತಹ ತೀರ್ಮಾನವನ್ನು ಕೈ ಗೊಂಡಿದ್ದಾರೆ.

add - tandoor .

Related Posts

Leave a Reply

Your email address will not be published.