ಮೂಡುಬಿದಿರೆಯ ಪುರಸಭೆಯಿಂದ ಸ್ವಚ್ಛತಾ ಲೀಗ್

ಮೂಡುಬಿದಿರೆ : ಸೇವಾ ದಿವಸದ ಅಂಗವಾಗಿ ಕೇಂದ್ರ ಸರಕಾರವು ಭಾರತ ಸ್ವಚ್ಛತಾ ಲೀಗ್ ‘ ಎಂಬ ಅಂತರ್ ನಗರ ಸ್ಪರ್ಧೆಯನ್ನು ಆಯೋಜಿಸಿದ್ದು ಮೂಡುಬಿದಿರೆಯ ಪುರಸಭೆಯು ವಿವಿಧ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಸಮಗ್ರ ಸ್ವಚ್ಛತಾ ಆಂದೋಲನ ನಡೆಯಿತು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಹಸಿರು ನಿಶಾನೆ ತೋರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಶ್ರೀ ಜೈನ ಮಠದ ಭಟ್ಟಾರಕ ಸ್ವಾಮೀಜಿ ಸಾವಿರ ಕಂಬದ ಬಸದಿಯ ಆವರಣದಲ್ಲಿ ವಿದ್ಯಾರ್ಥಿಗಳಿಗ ಪ್ರಮಾಣ ವಚನ ಬೋಧಿಸಿದರು.

ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಅವರ ನೇತೃತ್ವದಲ್ಲಿ ಸ್ವಚ್ಛ- ಸ್ವಸ್ಥ -ಸುಂದರ ಮೂಡುಬಿದಿರೆ” ಎಂಬ ತಂಡವನ್ನು ಹಿಂದೆಯೇ ರಚಿಸಲಾಗಿದ್ದು ಈ ತಂಡಗಳು ಜೈನ ಪೇಟೆ ಸಾವಿರ ಕಂಬದ ಬಸದಿ, ಸಾಲು ಮರದ ತಿಮ್ಮಕ್ಕ ಉದ್ಯಾವನದ ಬಳಿ ಕಡಲಕರೆ ನಿಸರ್ಗಧಾಮ ಮತ್ತು ಆಲಂಗಾರು ಮುಖ್ಯ ರಸ್ತೆ ವೃತ್ತದ ಬಳಿಯಿಂದ ವಿದ್ಯಾರ್ಥಿಗಳು ಸ್ವಚ್ಛತೆಯನ್ನು ಕೈಗೊಂಡರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ಶ್ವೇತಾ ಕುಮಾರಿ, ರಾಜೇಶ್ ನಾಯ್ಕ, ವಿ.ಕೆ.ಥೋಮಸ್, ಸೌಮ್ಯ ಶೆಟ್ಟಿ, ನಾಮ ನಿರ್ದೇಶಿತ ಸದಸ್ಯ ದಿನೇಶ್ ಪೂಜಾರಿ, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ಮೊದಲಾದವರು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.