ಜಾಂಬೂರಿ ಸ್ಟಾಲ್‍ಗಳು ಖಾಲಿ ಖಾಲಿ.. ಬಿಕೋ ಎನ್ನುತ್ತಿರುವ ವಿದ್ಯಾಗಿರಿ

ಮೂಡುಬಿದಿರೆ: ಸ್ಕೌಟ್ಸ್ ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿ ಕಾರ್ಯಕ್ರಮದಿಂದ ಕಳೆದ ಏಳು ದಿನಗಳಿಂದ ಜನಜಂಗುಳಿಯಿಂದ ತುಂಬಿಕೊಂಡಿದ್ದ ವಿದ್ಯಾಗಿರಿ ಜನ ಸಂದಣಿ ಇಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯ ಕಂಡು ಬಂತು. ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ಹಾಕಲಾಗಿದ್ದ ವಿವಿಧ ಸ್ಟಾಲ್ ಗಳು, ಕೃಷಿ ಮೇಳದ ವೇದಿಕೆ, ಕೃಷಿಸಿರಿ, ಪ್ರದರ್ಶನಕ್ಕಿಟ್ಟಿದ್ದ ವಿವಿಧ ರೀತಿಯ ಬಣ್ಣ ಬಣ್ಣದ ಹೂವಿನ ಗಿಡಗಳು, ಆಹಾರಮೇಳ, ಕಲಾಮೇಳದ ವೇದಿಕೆಗಳಲ್ಲಿ ಮಂಗಳವಾರ ರಾತ್ರಿ ತನಕ ಜನರು ತುಂಬಿಕೊಂಡು ಅತ್ತಿಂದಿತ್ತ ಓಡಾಡಿಕೊಂಡಿದ್ದರು.

ಆದರೆ ಬುಧವಾರದಂದು ಸ್ಟಾಲ್ ಗಳನ್ನು ತೆಗೆಯುವ ಕೆಲಸ ನಡೆಯುತ್ತಿತ್ತು. ಇದಲ್ಲದೆ ಜಾಂಬೂರಿಗಾಗಿ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಹಾಕಿದ್ದ ಶುಭಕೋರುವ ಜಾಹೀರಾತು ಫಲಕಗಳು, ಬಟ್ಟೆಗಳನ್ನು ಬಳಸಿ ಮಾಡಿದ್ದ ಫ್ಲೆಕ್ಸ್ ಗಳನ್ನು ಸಂಬಂಧಪಟ್ಟವರು ಬೆಳಗಿನಿಂದಲೇ ತೆಗೆಯುವ ಕೆಲಸವನ್ನು ಮಾಡುತ್ತಿರುವುದು ಕಂಡು ಬಂದಿದೆ. ಒಟ್ಟರೆಯಾಗಿ ಜಾಂಬೂರಿ ಕಾರ್ಯಕ್ರಮಕ್ಕಾಗಿ ಸಿದ್ಧಗೊಳಿಸಿದ್ದ ಕೃತಕ ಅರಣ್ಯ, ಕಟ್ಟಡಗಳಿಗೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದನ್ನು ತೆಗೆಯಲಾಗಿದ್ದು ವಿದ್ಯಾಗಿರಿಯಲ್ಲಿ ಕಾರ್ಮಿಕರು ಮಾತ್ರ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿರುವುದು ಕಂಡು ಬಂತು.

Related Posts

Leave a Reply

Your email address will not be published.