ಪುರಸಭಾಧಿವೇಶನಲ್ಲಿ ಸದಸ್ಯನಿಂದ ಅರೆನಗ್ನ ಪ್ರತಿಭಟನೆ

ಮೂಡುಬಿದಿರೆ: ತಾನು ನೀಡಿದ ಅಭಿವೃದ್ಧಿ ಕಾಮಗಾರಿಯ ಅರ್ಜಿ ಅಜೆಂಡಾದಲ್ಲಿ ಬಂದಿಲ್ಲವೆಂದು ಆರೋಪಿಸಿ ಸದಸ್ಯ ಕೊರಗಪ್ಪ ಅವರು ಬಟ್ಟೆ ತೆಗೆದು ಅರೆನಗ್ನ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ಸೋಮವಾರ ಪುರಸಭೆಯಲ್ಲಿ ನಡೆಯಿತು. ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊರಗಪ್ಪ ಅವರು ತಾನು ಅರ್ಜಿ ಕೊಟ್ಟಿರುವುದು ಅಜೆಂಡಾದಲ್ಲಿ ಬಂದಿಲ್ಲವೆಂದು ಆರೋಪಿಸಿದರು. ಅರೆನಗ್ನ ಸ್ಥಿತಿಯಲ್ಲಿ ಪ್ರತಿಭಟಿಸಿರುವುದನ್ನು ಆಡಳಿತ ಪಕ್ಷದ ಸದಸ್ಯರು ತೀವೃವಾಗಿ ಖಂಡಿಸಿದ ಘಟನೆ ನಡೆದಿದೆ. ತಾವು ಕೊಟ್ಟಿರುವ ಅರ್ಜಿ ತನ್ನ ಗಮನಕ್ಕೆ ಬಂದಿಲ್ಲವೆಂದು ಅಧ್ಯಕ್ಷ ಪ್ರಸಾದ್ ಕುಮಾರ್ ಕೊರಗಪ್ಪ ಗಮನಕ್ಕೆ ತಂದರು. ಪುರಸಭಾ ಉಪಾಧ್ಯಕ್ಷೆ ಸುಜಾತ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ,ಸದಸ್ಯರಾದ ಪಿ.ಕೆ.ತೋಮಸ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ರೂಪಾ ಶೆಟ್ಟಿ, ದಿವ್ಯಾ ಜಗದೀಶ್ ಮುಖ್ಯಾಧಿಕಾರಿ ಇಂದು ಎಂ., ಇಂಜಿನಿಯರ್ ಪದ್ಮನಾಭ ಗಾಣಿಗ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
