ಮೂಡುಬಿದ್ರೆಯಲ್ಲಿ ದಿನನಿತ್ಯ ಟ್ರಾಫಿಕ್ ಸಮಸ್ಯೆ ನೀಗಿಸಲು ಬೇಕಿದೆ ಮೂಡುಬಿದಿರೆಗೆ ಗ್ರಾಮಾಂತರ ಠಾಣೆ

ಮೂಡುಬಿದಿರೆ: ಬೆಳೆಯುತ್ತಿರುವ ನಗರ ಮೂಡುಬಿದಿರೆ ಜೈನ ಕಾಶಿಯಾಗಿ ಮಾತ್ರ ಉಳಿದಿಲ್ಲ ಇದು ಶಿಕ್ಷಣ ಕಾಶಿಯಾಗಿಯೂ ಮುಂದುವರೆದಿದೆ. ಇಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ವಾಹನಗಳ ಪಾರ್ಕಿಂಗ್ ಗೆ ಸರಿಯಾದ ಜಾಗವಿಲ್ಲದೆ ಜನರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ರಸ್ತೆಗಳ ಬದಿಗಳಲ್ಲೇ ನಿಲ್ಲಿಸಿ ಹೋಗುತ್ತಾರೆ ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗುತ್ತಿದೆ. ಈ ಸಮಸ್ಯೆಯನ್ನು ನೀಗಿಸಲು ಮೂಡುಬಿದಿರೆಯಲ್ಲಿ ಪೆÇಲೀಸರ ಕೊರತೆ ಇದೆ ಆದ್ದರಿಂದ ಮೂಡುಬಿದಿರೆಗೆ ಗ್ರಾಮಾಂತರ ಪೆÇಲೀಸ್ ಠಾಣೆಯ ಅವಶ್ಯಕತೆ ಇದೆ.

ತಾಲೂಕು ಇದೀಗ ಬೃಹತ್ ಮಟ್ಟದಲ್ಲಿ ಅಭಿವೃದ್ದಿ ಹೊಂದಿದ್ದು ಎಲ್ಲಿ ನೋಡಿದರಲ್ಲಿ ರಸ್ತೆಗಳು ನಿರ್ಮಾಣಗೊಂಡು ವಾಹನಗಳ ಸಂಖ್ಯೆ ದ್ವಿಗುಣಗೊಂಡಿದೆ. ಈ ಸಮಸ್ಯೆಯನ್ನು ನಿವಾರಿಸಲು ಮೂಡುಬಿದಿರೆಯಲ್ಲಿ ಟ್ರಾಫಿಕ್ ಪೆÇಲೀಸ್ ಠಾಣೆ ಅಗತ್ಯವಿತ್ತು ಆದರೆ ಕಾರಣಾಂತರದಿಂದ ಟ್ರಾಪಿಕ್ ಠಾಣೆಯ ಕನಸು ನನಸು ಆಗಲು ಸಾಧ್ಯವಿಲ್ಲದಿರುವುದರಿಂದ ಗ್ರಾಮೀಣ ಪ್ರದೇಶಕ್ಕಾದರೂ ಗ್ರಾಮಾಂತರ ಪೆÇಲೀಸ್ ಠಾಣೆಯನ್ನು ನೀಡಿದರೆ ಉತ್ತಮ ಎಂದು ಹೇಳುತ್ತಾರೆ ಸಾರ್ವಜನಿಕರು

ಇದರ ಜತೆಗೆ ನಗರದ ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸಲು ಮೂಡುಬಿದಿರೆ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮಾಂತರ ಪೆÇಲೀಸ್ ಠಾಣೆಯ ಅಗತ್ಯವಿದೆ ಗ್ರಾಮಾಂತರ ಪ್ರದೇಶದಲ್ಲಿ ಠಾಣೆಯಾದರೆ ಇತರ ಕೇಸುಗಳನ್ನು ಅಲ್ಲಿನ ಪೆÇಲೀಸರೆ ನಿಭಾಯಿಸುತ್ತಾರೆ ಆಗ ಮೂಡುಬಿದಿರೆ ನಗರ ಠಾಣೆಯ ಪೆÇಲೀಸರಿಗೆ ಟ್ರಾಫಿಕ್ ನ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ ಅದಕ್ಕಾಗಿ ಮೂಡುಬಿದಿರೆಗೆ ಗ್ರಾಮಾಂತರ ಪೆÇಲೀಸ್ ಠಾಣೆಯ ಅನಿವಾರ್ಯತೆ ಇದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Related Posts

Leave a Reply

Your email address will not be published.