ಮೂಡುಬಿದಿರೆ: ಪಡುಮಾರ್ನಾಡಿನಲ್ಲಿ ಸಿಡಿಲು ಆಘಾತ

ಮೂಡುಬಿದಿರೆ: ಪಡುಮಾರ್ನಾಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕ ಪಾಡ್ಯಾರ್ ನಿವಾಸಿ ಸುಜಾತ ಎಂಬವರ ಮನೆಗೆ ನಿನ್ನ ರಾತ್ರಿ ಸಿಡಿಲು ಬಡಿದು ಮನೆಯ ಕರೆಂಟ್ ಸ್ವಿಚ್ ಬೋರ್ಡ್, ‘ವಿದ್ಯುತ್ ವಯರ್‌ಗಳು ಸುಟ್ಟು ಸುಮಾರು 50 ಸಾವಿರ ಮೌಲ್ಯದ ವಿದ್ಯುತ್ ಇತರ ಸಲಕರಣೆಗಳು ಹಾನಿಗೀಡಾಗಿವೆ.

sidilu aghatha

ಸ್ಥಳಕ್ಕೆ ಮೂಡುಮಾರ್ನಾಡ್ ಪಂಚಾಯತ್ ಪಿಡಿಓ ಅನಿಲ್, ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಸುಜಾತ ಹಾಗು ಅವರ ತಾಯಿ ಮನೆಯೊಳಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂದರ್ಭದಲ್ಲಿ ಇವರ ಮನೆಯ ಪಕ್ಕದಲ್ಲಿ ಇರುವ ನಾಗಬನಕ್ಕೂ ಕೂಡ ಸಿಡಿಲು ಬಡಿದಿದ್ದು ನಾಗನ ಗುಡಿ ಭಾಗಶಃಹಾನಿಯಾಗಿದೆ.

Related Posts

Leave a Reply

Your email address will not be published.