ಮುದುರಂಗಡಿ ಗ್ರಾಮ ಪಂಚಾಯತ್ : ಅಧ್ಯಕ್ಷ-ಉಪಾಧ್ಯಕ್ಷರ ಮೇಲೆ ಕ್ರಿಮಿನಲ್ ಕೇಸ್ ಹಿನ್ನಲೆ, ಸಭೆ ಕರೆದು ಏಕಾಏಕಿ ರದ್ದುಗೊಳಿಸಿದ ಆರೋಪ
54ನೇ ಮುದರಂಗಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಕ್ರಿಮಿನಲ್ ಪ್ರಕರಣ ಇದ್ದರೂ, ಮಾಸಿಕ ಸಭೆಯನ್ನು ಕರೆದು ಏಕಾಏಕಿ ರದ್ದುಗೊಳಿಸಿದ ಬಗ್ಗೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಗ್ರಾಮ ಪಂಚಾಯತಿಗೆ ಬಂದ ಕೆಲ ಸದಸ್ಯರು ಈ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮುತ್ತು ಅವರಲ್ಲಿ ಸಭೆ ರದ್ದು ಗೊಳಿಸಿದ ಬಗ್ಗೆ ಸೃಷ್ಟಿಕರಣ ಕೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ನ್ಯಾಯಾಲಯದಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದರಿಂದ ಸಭೆ ನಡೆಸಲು ಅಸಾಧ್ಯವಾಗಿದೆ ಎಂದರು. ಕ್ರಿಮಿನಲ್ ಕೇಸ್ ಇರುವ ಬಗ್ಗೆ ಮಾಹಿತಿ ಇದ್ದರೂ ಸಭೆ ನಿಗದಿ ಪಡಿಸಿದ ಅಧ್ಯಕ್ಷರ ಉದ್ದೇಶ ಏನು ಎಂಬ ಸದಸ್ಯರ ಮಾತಿಗೆ ಉತ್ತರ ವಿಲ್ಲ.
ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಈ ಭಾಗದ ಮಾಜಿ ತಾ.ಪಂ. ಮೈಕಲ್ ರಮೇಶ್ ಡಿಸೋಜ, ಪಂಚಾಯತ್‍ನಲ್ಲಿ ಅಧ್ಯಕ್ಷರು ಇಲ್ಲದೆ ಹಲವಾರು ಕಡಿತಗಳು ಬಾಕಿ ಇದೆ. ಯಾವುದನ್ನು ಇತ್ಯರ್ಥ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳು ರಾಜಕೀಯ ಪ್ರೇರಿತವಾಗಿ ಕರ್ತವ್ಯ ನಿರ್ವಾಹಣೆ ನಡೆಸುತ್ತಿರುವುದರಿಂದ ಇಲ್ಲಿ ಅನ್ಯಾಯ ಮೇಲೈಸುತ್ತಿದೆ ನ್ಯಾಯದ ಕೊಲೆಯಾಗುತ್ತಿದೆ. ಸಿಬ್ಬಂದಿಗಳಿಗೆ ಸಂಬಳವೂ ಸಿಕ್ಕಿಲ್ಲ. ತುರ್ತಾಗಿ ಗ್ರಾಮ ಪಂಚಾಯತ್ ವಿಸ್ತರಣಾಧಿಕಾರಿಯವರು ಆಗಮಿಸಿ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.