ಮಂಜೆಶ್ವರ : ರಸ್ತೆ ಬದಿ ಕೂಲಿ ಕಾರ್ಮಿಕನ ಮೃತದೇಹ ಪತ್ತೆ
ಮಂಜೇಶ್ವರ: ಕರ್ನಾಟಕ ನಿವಾಸಿಯಾದ ಕೂಲಿ ಕಾರ್ಮಿಕನೊಬ್ಬನನ್ನು ರಸ್ತೆ ಬದಿಯಲ್ಲಿ ಗಾಯಗಳೊಂದಿಗೆ ರಕ್ತಸಿಕ್ತವಾದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಕರ್ನಾಟಕ ಬೆಳ್ಗಾಂ ನಿವಾಸಿ ಬಸಪ್ಪ ರಾಜು ಸಾವನ್ನಪ್ಪಿದ ದುರ್ದೈವಿ. ಮಂಜೇಶ್ವರ ಪಾವೂರು ಸೂಪಿ ನಗರ ರಸ್ತೆ ಬದಿಯಲ್ಲಿ ದಾರಿಹೋಕನೊಬ್ಬ ಈ ದೃಶ್ಯವನ್ನು ಕಂಡು ಮಾಹಿತಿ ನೀಡಿದ್ದಾನೆ.
ಎರಡು ದಿವಸಕ್ಕೆ ಮೊದಲು ಸೂಪಿ ನಗರ ನಿವಾಸಿಯೊಬ್ಬರು ಮಂಗಳೂರಿನಿಂದ ತೋಟದ ಕೆಲಸಕ್ಕಾಗಿ ಬಸಪ್ಪ ರಾಜುನನ್ನು ಕರೆ ತಂದಿದ್ದರು. ತೋಟದ ಕೆಲಸದ ಬಳಿಕ ಯಜಮಾನನ ಔಟ್ ಹೌಸ್ ನಲ್ಲಿ ಈತ ವಾಸಿಸುತಿದ್ದನೆನ್ನಲಾಗಿದೆ.ಕೆಲಸ ನಿರ್ವಹಿಸುತಿದ್ದ ಮನೆಯಿಂದ 150 ಕಿಲೋ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಶವ ಪತ್ತೆಯಾದ ಪಕ್ಕದಲ್ಲೇ ರಕ್ತ ಹೆಪ್ಪುಕಟ್ಟಿ ನಿಂತಿದೆ. ಅದರ ಪಕ್ಕದಲ್ಲೇ ಹುಲ್ಲು ಕತ್ತರಿಸುವ ಕತ್ತಿ ಕೂಡಾ ಲಭಿಸಿದೆ. ತೋಟದ ಮಾಲಿಕನ ಗೇಟಿನ ಮುಂಭಾಗದಲ್ಲೂ ರಕ್ತ ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿದ ತನಿಖೆ ನಡೆಸುತ್ತಿದ್ದಾರೆ.