ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯ ವರ್ತನೆ ಪ್ರಕರಣ : ಮೂಲ್ಕಿ- ಕೆರೆಕಾಡು ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

ಮೂಲ್ಕಿ- ಕಳೆದ ಕೆಳ ದಿನಗಳ ಹಿಂದೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಕಾಡು ಎಂಬಲ್ಲಿ ಆರೋಪಿ ಹಳೆಯಂಗಡಿ ಇಂದಿರಾ ನಗರದ ನಿವಾಸಿ ದಾವುದ್ ಹಕೀಮ್ ಎಂಬಾತ ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಲ್ಕಿ ಪೆÇಲೀಸರು ಪ್ರಕರಣದ ತನಿಖೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕೆರೆಕಾಡು ಗ್ರಾಮಸ್ಥರು ಮುಲ್ಕಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಕುಸುಮಾದಾರ್ ರವರನ್ನು ತರಾಟೆಗೆ ತೆಗೆದುಕೊಂಡರು ಪ್ರತಿಭಟನೆಯಲ್ಲಿದ್ದ ಮಹಿಳೆಯರು ಮಾತನಾಡಿ ಮಹಿಳೆಯರ ವಿರುದ್ಧ ಅಸಭ್ಯವಾಗಿ ವರ್ತಿಸಿದ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಬೆಳ್ಳಾಯರು ಪಡು ಪಣಂಬೂರು, ಕಲ್ಲಾಪು, ಪ್ರದೇಶದಲ್ಲಿ ಕಳೆದ ಕೆಲವು ತಿಂಗಳಿನಿಂದ ದುಷ್ಕರ್ಮಿಗಳಿಂದ ಅಸಭ್ಯ ವರ್ತನೆಯಂತಹ ಅಹಿತಕರ ಘಟನೆ ನಡೆಯುತ್ತಿದ್ದು ಭಯಭೀತ ವಾತಾವರಣ ಸೃಷ್ಟಿಯಾಗಿದೆ ಕೂಡಲೇ ಮುಲ್ಕಿ ಪೆÇಲೀಸರು ಕಾರ್ಯಪ್ರವತ್ತರಾಗಿ ಶೀಘ್ರವೇ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಮುಲ್ಕಿ ಮೂಡಬಿದಿರೆ ಕ್ಷೇತ್ರ ಸಮಿತಿ ಬಿಜೆಪಿ ಅಧ್ಯಕ್ಷ ಸುನೀಲ್ ಅಳ್ವ, ಪ್ರಮುರಾದ ಸತೀಶ್ ಅಂಚನ್, ಶೈಲೈ?ಶ್, ವಿನೋಧ ಕುಮಾರ್, ಹಿಂದು ಜಾಗರಣ ವೇದಿಕೆ ಪ್ರಮುಖರಾದ ಬಾಲಕೃಷ್ಣ ಮುಂಚೂರು, ಸಮಿತ್ ರಾಜ್ ದರೆಗುಡ್ಡೆ, ಪುಷ್ಪರಾಜ್ ಕುಳಾಯಿ, ಸಂದೀಪ್ ಹೆಗ್ಡೆ, ಪೂರ್ಣಿಮಾ ಹಳೆಯಂಗಡಿ ಚಂದ್ರಕಲಾ ಹಳೆಯಂಗಡಿ ಮತ್ತಿತರು ಉಪಸ್ಥಿತರಿದ್ದರು
