ಮೈಸೂರು ಚಾಮುಂಡೇಶ್ವರಿ ಅಮ್ಮನ ಕನ್ನಡ ಗೀತೆ : ಯೂಟ್ಯೂಬ್ ಚಾನೆಲ್‍ನಲ್ಲಿ ಶೀಘ್ರದಲ್ಲಿ ಬಿಡುಗಡೆ
ದಯಾ ಕ್ರಿಯೇಷನ್ ಆರ್ಪಿಸುವ ಮೈಸೂರು ಚಾಮುಂಡೇಶ್ವರಿ ಅಮ್ಮನ ಬೆಟ್ಟದ ತಾಯಿ ಚಾಮುಂಡಿ ಕನ್ನಡ ಭಕ್ತಿ ಗೀತೆ ಪೋಸ್ಟರ್ ಬಿಡುಗಡೆಗೊಂಡಿದೆ. ಶೀಘ್ರದಲ್ಲಿ ಕನ್ನಡ ಭಕ್ತಿ ಗೀತೆ ನಿಮ್ಮ ಮುಂದೆ ಬರಲಿದೆ. ಈ ಹಾಡಿಗೆ ಸಾಹಿತ್ಯ ಗಡಿನಾಡ ಸಾಹಿತ್ಯ ಕುವರ ಬಿರುದಾಂಕಿತ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ ಸಾಹಿತ್ಯ ಬರೆದಿದ್ದಾರೆ. ತನುಷ ಎಸ್ ಕುಂದರ್ ಬ್ರಹ್ಮಾವರ ಗಾಯನ ಮತ್ತು ಬಾಲ ನಟಿ ಲಿಖಿತ ಶೇರ್ವಾನಿ ಅಭಿನಯದಲ್ಲಿ ಮೂಡಿಬರಲಿದೆ. ಈ ಹಾಡಿಗೆ ರವಿರಾಜ್ ಶೆಟ್ಟಿ. ಸಂಗೀತ ನೀಡಿದರೆ, ಸಮಗ್ರ ನಿರ್ವಹಣೆ ದಯಾನಂದ ಅಮೀನ್ ಬಾಯಾರು ನಿರ್ವಹಿಸಿದ್ದಾರೆ. ಈ ಹಾಡು ಶೀಘ್ರದಲ್ಲಿ ದಯಾ ಕ್ರಿಯೆಷನ್ ಯೌಟ್ಯೂಬ್ ಚಾನೆನಲ್ಲಿ ಬಿಡುಗಡೆಯಾಗಲಿದೆ.