ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ಹಿಂಜಾವೆ, ಭಜರಂಗದಳ, ದುರ್ಗಾವಾಹಿನಿ ವತಿಯಿಂದ ಜನಜಾಗೃತಿ ಅಭಿಯಾನ

ಕರಾವಳಿಯ ಭದ್ರತೆಗೆ ಸವಾಲೊಡ್ಡುವ ಭಯೋತ್ಪಾದಕತೆಯ ವಿರುದ್ಧ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ದುರ್ಗಾ ವಾಹಿನಿ ವತಿಯಿಂದ ಜನಜಾಗೃತಿ ಅಭಿಯಾನ ಮಂಗಳೂರು ನಗರ ಹಾಗೂ ನಗರದ ಹೊರವಲಯದ ಪ್ರದೇಶಗಳಲ್ಲಿ ನಡೆಯಿತು.
ಮಂಗಳೂರಿನ ಜ್ಯೋತಿ ವೃತ್ತ, ಉರ್ವಸ್ಟೋರ್, ಕಾವೂರು, ಮೂಡಬಿದ್ರೆ, ತೊಕ್ಕೊಟ್ಟು, ಗುರುಪುರ ಕೈಕಂಬ, ಸುರತ್ಕಲ್ ನಲ್ಲಿ ಅಭಿಯಾನ ನಡೆಯಿತು.

SHARAN PUMPWELL

ಇಸ್ಲಾಮಿಕ್ ಭಯೋತ್ಪಾದನೆ ವಿರುದ್ದ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು. ಮಂಗಳೂರಿನ ಜ್ಯೋತಿ ಬಳಿ ನಡೆದ ಅಭಿಯಾನದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮಾತನಾಡಿ, ಭಯೋತ್ಪಾದಕರು ಹಲವು ಹಿಂದೂ ದೇಗುಲಗಳನ್ನು ಸ್ಫೋಟಿಸುವ ಸಂಚು ಹೂಡಿದ್ದರು ಎಂದು ತಿಳಿದು ಬಂದಿದೆ. ಅಂತಹ ಸಂಚನ್ನ ವಿಫಲಗೊಳಿಸಲು ವಿಶ್ವ ಹಿಂದೂ ಪರಿಷತ್ ದೇಗುಲದ ಪರ ನಿಲ್ಲಲಿದೆ. ಕುಕ್ಕರ್ ಸ್ಫೋಟದಲ್ಲಿ ಗಾಯಾಳಾಗಿರುವ ಆರೋಪಿ ಶಾರಿಕ್ ನ ಪರ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಆಗ್ರಹಿಸಿದ್ದಾರೆ. ಇನ್ನೂ ಕಾವೂರಿನಲ್ಲಿ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಹಲವಾರು ಮಂದಿ ಭಾಗವಹಿಸಿದ್ರು.

Related Posts

Leave a Reply

Your email address will not be published.