ಮುಲ್ಕಿ : ಹೆಲ್ಪ್ ಲೈನ್ ಸೇವಾ ತಂಡದಿಂದ ಬಡಕುಟುಂಬಕ್ಕೆ ನೂತನ ಗೃಹ ಹಸ್ತಾಂತರ

ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಮಂಗಳೂರಿನ ಹೆಲ್ಪ್ ಲೈನ್ ಸೇವಾ ತಂಡವು ಮುಲ್ಕಿ ತಾಲೂಕಿನ ಐಕಲ ಗ್ರಾ.ಪಂ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದ ಬಡಕುಟುಂಬದ ಶಾಂತಿಯವರ ಅವ್ಯವಸ್ಥೆಯಲ್ಲಿದ ಮನೆಯನ್ನು ಸೇವಾ ಯೋಜನೆಯಲ್ಲಿ ವಿಶೇಷ ಮುತುವರ್ಜಿಯಲ್ಲಿ ನಿರ್ಮಿಸಿ ಕೊಟ್ಟಿದ್ದು, ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ನೂತನ ಗೃಹ “ಅನುಗ್ರಹ” ವಿಶೇಷ ಹೋಮ ಪೂಜೆಯೊಂದಿಗೆ ಗೃಹಪ್ರವೇಶ ಗೃಹಹಸ್ತಾಂತರ ನಡೆಯಿತು. ಹೆಲ್ಪ್ ಲೈನ್ ಸೇವಾ ಸಂಸ್ಥೆ ಮಹಾಪೆÇೀಷಕರು ಮತ್ತು ಹಿರಿಯರ ಉಪಸ್ಥಿತಿಯಲ್ಲಿ ನಡೆದ ಸರಳ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ನೂತನ ಲೊಗೊ ಬಿಡುಗಡೆಗೊಳಿಸಲಾಯಿತು.ಇದೇ ಸಂದರ್ಭ ಈ ಸೇವಾಸಂಸ್ಥೆಯೊಂದಿಗೆ ಸಹಕಾರ ನೀಡಿದ ಮೇಸ್ತ್ರಿಯವರನ್ನು, ಸಮಾಜ ಸೇವಕರು, ನಮ್ಮ ಸೇವಾ ಮಾಣಿಕ್ಯಗಳನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅತಿಥಿಗಳಾದ ಉಮಾನಾಥ್ ಅಮೀನ್ ನಂತೂರು, ಸಮಾಜಸೇವಕಿ ಪದ್ಮಿನಿ ವಸಂತ್ ಐಕಲ, ಗೋಪಾಲ್ ಕೃಷ್ಣ ಪುನರೂರು, ಮಂಜುನಾಥ್ ಎರ್ಮಲ್, ಕೃಷ್ಣ ಕುಳಾಯಿ, ಸಂಜಿತ್ ಶೆಟ್ಟಿ, ವಿತೇಶ್ ಶಾಂತಿಪಾಲ್ಕೆ, ರಾಜೇಶ್ ಶೆಟ್ಟಿ, ದಿವಾಕರ ಚೌಟ, ದಿನೇಶ್ ಪುತ್ರನ್,
ಹೆಲ್ಪ್ ಲೈನ್ ಸೇವಾ ತಂಡದ ಸರ್ವಸದಸ್ಯರು ಸದಸ್ಯರು ಉಪಸ್ಥಿತರಿದ್ದರು. ಧನು ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.