ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತದ ನೂತನ ಶಿರ್ವ ಶಾಖೆ ಶುಭಾರಂಭ
ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ನೂತನ ಶಾಖೆಯು ಶಿರ್ವದ ಸುವರ್ಣ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಶುಭಾರಂಭಗೊಂಡಿತು.
ನೂತನ ಶಿರ್ವ ಶಾಖೆಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು.
ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರುಗಳಾದ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಸೇಫ್ ಲಾಕರನ್ನು ಮತ್ತು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಗಣಕಯಂತ್ರ ವಿಭಾಗವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ ಬೆಂಗಳೂರಿನ ನಿರ್ದೇಶಕರಾದ ಮಂಜುನಾಥ್ ಎಸ್ ಕೆ ಅವರು ಪಾಸ್ ಪುಸ್ತಕವನ್ನು ವಿತರಿಸಿದರು.
ನಂತರ ಶಿರ್ವ ಮಹಿಳಾ ಸೌಧದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, 13 ವರ್ಷದಿಂದ ಸಹಕಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ವರ್ಣ ಸೌಹಾರ್ದ ಸಹಕಾರಿ ಸಂಘವು ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದ್ದು , ಈಗ ಶಿರ್ವದಲ್ಲಿ ಶುಭಾರಂಭಗೊಂಡ ನೂತನ ಶಾಖೆಯು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ನೂತನ ಶಾಖೆಗೆ ಶುಭ ಹಾರೈಸಿದರು.
ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿ. ಪಡುಬಿದ್ರಿಯ ಅಧ್ಯಕ್ಷರಾದ ಶೇಖರ್ ಕೆ ಕರ್ಕೇರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವರ್ಣ ಸೌಹಾರ್ದ ಸಹಕಾರಿ ಸಂಘದ ಸಾಧನೆಯ ಹಾದಿಯ ಬಗ್ಗೆ ವಿವರಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಡುಪಿ ಮತ್ತು ದ.ಕ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ ಎಸ್, ಶಿರ್ವ ಗುರುದೇವ ಸ್ವೀಟ್ಸ್‌ನ ಮಾಲಕರಾದ ರತ್ನಾಕರ ಕುಕ್ಯಾನ್, ಶಿರ್ವ ಸುವರ್ಣ ಕಾಂಪ್ಲೆಕ್ಸ್ ಸುರೇಶ್ ಸುವರ್ಣ ಅವರನ್ನು ಮತ್ತು ಸರ್ವಧರ್ಮದ ಗೌರವಾನ್ವಿತರಾದ ಜೆರಾಲ್ಡ್ ಕಬ್ರಾಲ್, ಲೀನಾ ಮಚಾಡೊ, ನೋಬರ್ಟ್ ಮಚಾಡೊ, ಸರ್ಪುದ್ದೀನ್, ಜುಬೇರ್, ಹಸನಬ್ಬ ಶೇಖ್, ಬಾಬು ಶೆಟ್ಟಿಗಾರ್, ಪೌಲ್ ಅರ್ಹಾನ್ನ, ಸುಧೀರ್ ಕರ್ಕೇರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಅಧ್ಯಕ್ಷರಾದ ಜುಬೇರ್, ಶಿರ್ವ ಚೆಕ್‌ಪಾದೆಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅಧ್ಯಕ್ಷರಾದ ಗೋಪಾಲ ಪೂಜಾರಿ, ಅಶೋಕ್ ಕುಮಾರ್ ಮಂಗಳೂರು, ಶಿರ್ವ ವ್ಯವಸಾಯ ಸಂಘ ಅಧ್ಯಕ್ಷರು ಕುತ್ತ್ಯಾರು ಪ್ರಸಾದ್ ಶೆಟ್ಟಿ,ಸಹಕಾರಿಯ ಉಪಾಧ್ಯಕ್ಷ ಸುಧೀರ್ ಕುಮಾರ್ ವೈ, ನಿರ್ದೇಶಕರುಗಳಾದ ತಾರನಾಥ್ ಎಚ್ ಬಿ, ಮಹೇಶ ಶಾಂತಿ, ದೀಪಕ್ ಕುಮಾರ್ ವೈ, ಶುಭಾಂಜಲಿ, ಪ್ರಿಯದರ್ಶಿನಿ, ಸುಕುಮಾರ್ ವೈ , ಸಂಕಪ್ಪ ಎ, ಮತ್ತಿತರರು ಉಪಸ್ಥಿತರಿದ್ದರು.
ಅಶ್ವಿನಿ ಮತ್ತು ದೀಪಾ ಪ್ರಾರ್ಥಿಸಿದರು. ಮಮಿತಾ ಸ್ವಾಗತಿಸಿ, ಭಾಸ್ಕರ್ ಅಮೀನ್ ತೋಕೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.