ಹಳೆಯಂಗಡಿ:ಉಚಿತ ಬೇಸಿಗೆ ಶಿಬಿರ ಚಿಣ್ಣರ ಹಬ್ಬ

ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘ (ರಿ.) ಎಸ್.ಕೋಡಿ, ತೋಕೂರು, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ- ಇವರ ಸಹಭಾಗಿತ್ವದಲ್ಲಿ ಉಚಿತ ಬೇಸಿಗೆ ಶಿಬಿರ ಚಿಣ್ಣರ ಹಬ್ಬ 2025 ನಡೆಯಲಿದೆ.

ಈ ಶಿಬಿರದಲ್ಲಿ ಯೋಗ/ಧ್ಯಾನ,ಶ್ಲೋಕ/ ಭಗವದ್ಗೀತಾ,ಭಜನೆ,ಸಂಗೀತ,ನೃತ್ಯ,ನೀತಿ ಕಥೆಗಳು, ಪೇಪರ್ ಕ್ರಾಫ್ಟ್,ಚಿತ್ರಕಲೆ/ ವರ್ಣ ಕಲೆ,ವ್ಯಕ್ತಿತ್ವ ವಿಕಸನ
ಕಸದಿಂದ ರಸ,ಆವೆ ಮಣ್ಣಿನ ಕಲಾಕೃತಿ ಹಾಗೂ ಗುಂಪು ಚರ್ಚೆ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು,
ದಿನಾಂಕ: 06 ಏಪ್ರಿಲ್ 2025 ಆದಿತ್ಯವಾರದಿಂದ 13 ಏಪ್ರಿಲ್ 2025 ಆದಿತ್ಯವಾರದವರೆಗೆ ಸಮಯ: ಬೆಳಗ್ಗೆ 9.00 ಗಂಟೆಯಿಂದ ಪೂರ್ವಾಹ್ನ 1.00 ಗಂಟೆಯವರೆಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ (ರಿ) ಎಸ್.ಕೋಡಿ,ತೋಕೂರು ನಲ್ಲಿ ನಡೆಯಲಿದೆ‌.

ವಿಶೇಷ ಸೂಚನೆ :
ಮೊದಲು ಬಂದ 50 ಶಿಬಿರಾರ್ಥಿಗಳ ಹೆಸರನ್ನು ಮಾತ್ರ ಸ್ವೀಕರಿಸಲಾಗುವುದು ಹಾಗೂ 7 ರಿಂದ 15 ವರ್ಷದ ವಯೋಮಿತಿಯ ಮಕ್ಕಳಿಗೆ ಮಾತ್ರ ಅವಕಾಶ ಇರಲಿದೆ.

ಹೆಸರು ನೀಡಲು ಕೊನೆಯ ದಿನಾಂಕ 03/04/2025. ನೊಂದಣಿ ಮಾಡಲು ಮೇಲಿನ QR Code ಅನ್ನು ಸ್ಕ್ಯಾನ್ ಮಾಡಿ ಅಥವ ಕೆಳಗೆ ಕೊಟ್ಟ ಗೂಗಲ್ ಲಿಂಕ್ ಅನ್ನು ಬಳಸಿ ಕೊಳ್ಳಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
9449757357/ 9535910257/ 8748870381/ 9448260498

Related Posts

Leave a Reply

Your email address will not be published.