ಪಡುಬಿದ್ರಿ : ಪೆಟ್ ಶೋಪ್ ನಲ್ಲಿ ವಿದ್ಯುತ್ ಆಕಸ್ಮಿಕ ಸುಟ್ಟು ಕರಕಲಾದ ಹಕ್ಕಿ , ಮೀನು
ವಿದ್ಯುತ್ ಅವಘಢದಿಂದ ಮುಚ್ಚಿದ ಅಂಗಡಿಯ ಒಳಗೆ ಬೆಂಕಿ ಕಾಣಿಸಿಕೊಂಡು ಅಕ್ವೇರಿಯಂಗಳ ಸಹಿತ ವಿವಿಧ ಜಾತಿಗಳ ಹಕ್ಕಿ ಸಹಿತ ವಿವಿಧ ಜಾತಿಗಳ ಮೀನುಗಳು ಬೆಂಕಿಯಲ್ಲಿ ಸಿಲುಕಿ ಭಸ್ಮವಾದ ಘಟನೆ ನಡೆದಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಪಡುಬಿದ್ರಿ ಮುಖ್ಯ ಮಾರುಕಟ್ಟೆ ರಸ್ತೆಯ ಪೊಲೀಸ್ ಠಾಣಾ ಸಮೀಪದ ಗ್ರಾ.ಪಂ. ಕಟ್ಟಡದ ಅವಿಘ್ನ ಅಕ್ವೇರಿಯಂ ಮಾರಾಟದಂಗಡಿಯಲ್ಲಿ ಮುಂಜಾನೆ ಹೊಗೆ ಕಾಣಿಸಿಕೊಂಡಿದ್ದು ಇದನ್ನು ಕಂಡ ಸಾರ್ವಜನಿಕರು ಪೆÇಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಅಂಗಡಿ ಮಾಲಿಕ ದಿನೇಶ್ ಎಂಬವರು ಬಂದು ಬೀಗ ತೆರೆದು ನೋಡಿದಾಗ ಅಂಗಡಿಯ ಒಳ ಭಾಗ ಬಹುತೇಕ ಬೆಂಕಿಗೆ ಆಹುತಿಯಾಗಿದ್ದು ಆಯುಷ್ಯ ಬಲವಾಗಿತ್ತೊ ಏನೋ ಆ ಬೆಂಕಿಯ ತೀವ್ರತೆಗೂ ಒಳಭಾಗ ಗೂಡಲ್ಲಿದ್ದ ಮೂರು ಮೊಲಗಳನ್ನು ರಕ್ಷಿಸಲಾಗಿದೆ. ಈ ದುರಂತದಿಂದ ಎರಡುವರೆ ಲಕ್ಷ ರೂಪಾಯಿಗ ಅಧಿಕ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಉಡುಪಿಯಿಂದ ಬಂದ ಅಗ್ನಿ ಶಾಮಕದಳ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಸಹಕರಿಸಿದ್ದಾರೆ.