ಪಡುಬಿದ್ರಿ ಜಂಕ್ಷನ್ ಮೋಪೆಡ್ ಸವಾರನ ಮೇಲೆ ಮುಗುಚಿ ಬಿದ್ದ ಲಾರಿ : ಅಪಘಾತದಲ್ಲಿ ವ್ಯಕ್ತಿ ಸ್ಥಳದಲ್ಲೇ ಮೃತ್ಯು
ಲಾರಿಯೊಂದು ದ್ವಿಚಕ್ರ ವಾಹನದ ಮೇಲೆ ಮಗುಚಿ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರಿ ಜಂಕ್ಷನ್ ನಲ್ಲಿ ನಡೆದಿದೆ.
ಮೃತರನ್ನು ಕಂಚಿನಡ್ಕ ನಿವಾಸಿ ಶಂಸುದ್ದೀನ್ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಲಾರಿ ಪಡುಬಿದ್ರಿ ಜಂಕ್ಷನ್‍ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದ ಮೇಲೆ ಮಗುಚಿಬಿತ್ತು.
ಸ್ಥಳದಲ್ಲೇ ಮೃತಪಟ್ಟ ಶಂಶುದ್ದೀನ್ ಅವರ ಮೃತದೇಹವನ್ನು ಪೋಲಿಸರು ಸ್ಥಳೀಯರ ಸಾರ್ವಜನಿಕರ ಸಹಕಾರದಿಂದ ತೆರವುಗೊಳಿಸಿದರು. ಶಂಸುದ್ದೀನ್ ಐಸ್‍ಕ್ಯಾಂಡಿ ವ್ಯಾಪಾರ ಮಾಡುತ್ತಿದ್ದು, ಮಳೆಗಾಲದಲ್ಲಿ ಈ ವ್ಯಾಪಾರ ಇಲ್ಲದ ಕಾರಣ ಮನೆಯಲ್ಲಿದ್ದರು. ಪಡುಬಿದ್ರಿಯ ವಾರದ ಸಂತೆಯಲ್ಲಿ ತರಕಾರಿ ಖರೀದಿಸಿ ಕಂಚಿನಡ್ಕದ ಮನೆಯತ್ತ ತೆರಳುತಿದ್ದಾಗ ಈ ಘಟನೆ ನಡೆದಿದೆ.