ಜುಲೈ 9ರಂದು ಪಡುಬಿದ್ರಿ ಸೊಸೈಟಿಯ ಹವಾನಿಯಂತ್ರಿತ ಸಿಟಿ ಶಾಖೆ ಉದ್ಘಾಟನೆ


ಪಡುಬಿದ್ರಿಯಲ್ಲಿ ನವೀಕೃತ ಹವಾನಿಯಂತ್ರಿತ ಸಿಟಿ ಶಾಖೆಯ ಉದ್ಘಾಟನಾ ಸಮಾರಂಭ ಹಾಗೂ ಕೃಷಿ ಸಲಕರಣೆಗಳ ಮಾರಾಟ ವಿಭಾಗದ ಶುಭಾರಂಭವು ಜು. 9 ರಂದು ನಡೆಯಲಿದೆ.
ಗ್ರಾಹಕರಿಗೆ ಹವಾನಿಯಂತ್ರಿತ ಶಾಖೆಯೊಂದಿಗೆ ಸೊಸೈಟಿಯಲ್ಲಿ ದೊರಕುತ್ತಿರುವ ವಿವಿಧ ಸೇವೆಗಳನ್ನು ಆಧುನೀಕರಣ ಗೊಳಿಸುವ ಸಲುವಾಗಿ ಪಡುಬಿದ್ರಿ ಸೊಸೈಟಿಯ ಹೃದಯ ಶಾಖೆಯಾದÀ ಸಿಟಿ ಶಾಖೆಯನ್ನು ಸಂಪೂರ್ಣ ಹವಾನಿಯಂತ್ರಿತ ಶಾಖೆಯನ್ನಾಗಿ ನವೀಕೃತ ಗೊಳಿಸಿ ಇದರೊಂದಿಗೆ ಕೃಷಿ ಸಲಕರಣೆ ಮಾರಾಟ ವಿಭಾಗದ ಉದ್ಘಾಟನೆಯನ್ನು ದಿನಾಂಕ ಜು.9 ರಂದು ಶನಿವಾರ ಪೂರ್ವಾಹ್ನ 11:00 ಗಂಟೆಗೆ ಆಯೋಜಿಸಲಾಗಿದೆ ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಹೇಳಿದ್ದಾರೆ.

ಸೊಸೈಟಿಯ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸಭಾಕಾರ್ಯಕ್ರಮವನ್ನು ಅದೇ ದಿನ ಪೂವಾಹ್ನ 11:15 ಕ್ಕೆ ಆಯೋಜಿಸಲಾದ್ದು. ನವೀಕೃತ ಶಾಖೆಯ ಉದ್ಘಾಟನೆಯ ಸವಿನೆನಪಿಗಾಗಿ ಸಾರ್ವಜನಿಕರಿಗೆ ತಂಪಾದ ಶುದ್ದ ಕುಡಿಯುವ ನೀರಿನ ಸೌಲಭ್ಯದ ಲೋಕಾರ್ಪಣೆ, ಸಿಟಿ ಶಾಖೆ ಪಡುಬಿದ್ರಿಯಲ್ಲಿ ನೂತನವಾಗಿ ಚಿನ್ನಾಭರಣದ ಪರಿಶುದ್ದತೆಯನ್ನು ಪರಿಶೀಲಿಸುವ ಸೇವೆಯನ್ನು ಸಾರ್ವಜನಿಕರಿಗಾಗಿ ನೂತನವಾಗಿ ಸೊಸೈಟಿಯ ಪ್ರಧಾನ ಶಾಖೆ ಪಡುಬಿದ್ರಿಯಲ್ಲಿ ಪ್ರಾರಂಭ, ಸೊಸೈಟಿಯ ಕಾರ್ಯವ್ಯಾಪ್ತಿಯಲ್ಲಿ ಭತ್ತದ ಕೃಷಿ ಬೆಳೆಯುತ್ತಿರುವ 100ಕ್ಕೂ ಅಧಿಕ ಕೃಷಿಕರಿಗೆ “ಸಂಗಮ ಕೃಷಿ ನಿಧಿ” ಯಿಂದ ಸಹಾಯಧನ ಹಸ್ತಾಂತರ ಯೋಜನೆ ಶುಭಾರಂಭಗೊಳ್ಳಲಿದೆ ಎಂದರು. ನೂತನ ನವೀಕೃತ ಶಾಖೆಯ ಉದ್ಘಾಟನೆಯನ್ನು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಮ್.ಎನ್. ರಾಜೇಂದ್ರಕುಮಾರ್, ಕೃಷಿ ಸಾಮಾಗ್ರಿಗಳ ಮಳಿಗೆ ಉದ್ಘಾಟನೆಯನ್ನು ಕರ್ನಾಟ ಸರ್ಕಾರದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿನ ಸೌಲಭ್ಯದ ಲೋಕಾರ್ಪಣೆಯನ್ನು ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ, ಸಹಿತ ವಿವಿಧ ಸಲಕರಣೆ ವಿತರಣೆಗಳನ್ನು ಗಣ್ಯತೀ ಗಣ್ಯರು ನಡೆಸಲಿದ್ದಾರೆ ಎಂದರು.

ಈ ಸಂದರ್ಭ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ. ಎಚ್, ಉಪಾಧ್ಯಕ್ಷ ಗುರುರಾಜ್ ಪೂಜಾರಿ, ನಿರ್ದೇಶಕರುಗಳಾದ ಗಿರೀಶ್ ಪಲಿಮಾರು, ಶಿವರಾಮ ಎನ್ ಶೆಟ್ಟಿ, ವಾಸುದೇವ ದೇವಾಡಿಗ, ಮಾಧವ ಆಚಾರ್ಯ, ಸ್ಟ್ಯಾನಿ ಕ್ವಾಡ್ರಸ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.