ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ, ಉಡುಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ

ಉಡುಪಿ: ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ,ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. 27 ವರ್ಷದ ಅಂಕೋಲ ಮೂಲದ ಸುನೀತಾ ಎನ್ನುವ ಮಹಿಳೆಗೆ ಸಿಸೇರಿಯನ್ ಹೆರಿಗೆ ಮಾಡಿಸಲಾಗಿದ್ದು ತಾಯಿ ಮಕ್ಕಳು ಅರೋಗ್ಯವಂತರಾಗಿದ್ದಾರೆ.ಮಹಿಳೆಗೆ ಇದು ಪ್ರಥಮ ಹೆರಿಗೆಯಾಗಿದ್ದು,ತ್ರಿವಳಿ ಮಕ್ಕಳನ್ನು ಕಂಡು ಸುನೀತಾ ದಂಪತಿಗಳು ಸಂಭ್ರಮಿಸಿದ್ದಾರೆ. ಸರಕಾರಿ ಮಹಿಳಾ ಮತ್ತು ಮಕ್ಕಳ ಅಸ್ಪತ್ರೆಯ ಡಾ.ಕವಿಶಾಭಟ್ ,ಡಾ.ರಜನಿ ಕಾರಂತ್ ,ಡಾ ಸೂರ್ಯನಾರಾಯಣ,ಡಾ,ಗಣಪತಿ ಹೆಗಡೆ ಹಾಗೂ ಡಾ.ಮಹಾದವ ಭಟ್ ವೈದರುಗಳ ತಂಡ ತ್ರಿವಳಿ ಮಕ್ಕಳ ಹೆರಿಗೆ ಯಶಸ್ವಿಯಾಗುವ ನಿಟ್ಟಿನಲ್ಲಿ ಕೈ ಜೋಡಿಸಿದ್ದಾರೆ.