ಪಣಿಯೂರು ಬಬ್ಬುಸ್ವಾಮಿ ದೈವಸ್ಥಾನ : ಹೊರೆ ಕಾಣಿಕೆ ಸಮರ್ಪಣೆ, ನಗನಾಣ್ಯ ಮೆರವಣಿಗೆ

ಸುಮಾರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಪುನರ್ ನಿರ್ಮಾಣಗೊಂಡಿರುವ ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜರಗಲಿರುವ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಬೃಹತ್ ಹೊರೆಕಾಣಿಕೆ ಸಮರ್ಪಣೆ ಮತ್ತು ನಗನಾಣ್ಯ ಪರಿಕರಗಳ ಮೆರವಣಿಗೆ ನಡೆಯಿತು.



ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಗುತ್ತಿನಾರ್ ಯೋಗೀಶ್ ಶೆಟ್ಟಿ ಪಣಿಯೂರುಗುತ್ತು, ಗೌರವಾಧ್ಯಕ್ಷ ದೇವರಾಜ ರಾವ್ ನಡಿಮನೆ, ಕಾರ್ಯಾಧ್ಯಕ್ಷ ಕರುಣಾಕರ ಶೆಟ್ಟಿ ಪಣಿಯೂರುಗುತ್ತು, ಮುಂಬಯಿ ಸಮಿತಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ನಡಿಮನೆ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ ಪಡುಮನೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಪಣಿಯೂರು ಬರ್ಪಾಣಿ, ಕೋಶಾಧಿಕಾರಿ ಸುರೇಶ್ ಪೂಜಾರಿ ಓಡಿಬೆಟ್ಟು, ಗುರಿಕಾರ ಶಂಕರ್ ಬಿ., ಸಂಜೀವ ಪಣಿಯೂರು, ಅರ್ಚಕ ಬಾಲಕೃಷ್ಣ ಪಣಿಯೂರು, ಸಮಿತಿ ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಕೊರಗಶೆಟ್ಟಿ, ಆನಂದ ಶೆಟ್ಟಿ, ಅಶೋಕ ಪೂಜಾರಿ, ಶಿವ ಪೂಜಾರಿ, ಮಾಧವ ಸನಿಲ್, ಸಾಧು ಶೆಟ್ಟಿ, ಕುಟ್ಟಿ ಮೂಲ್ಯ, ಸಂಜೀವ ಶೆಟ್ಟಿ, ಅಶೋಕ ಶೆಟ್ಟಿ, ಕೀರ್ತಿ ಶೆಟ್ಟಿ, ಜಗನ್ನಾಥ ಪೂಜಾರಿ, ಸುರೇಂದ್ರ ಪಣಿಯೂರು, ಜಯ ಶೆಟ್ಟಿ, ವಿವಿಧ ಉಪ ಸಮಿತಿಗಳ ಅಧ್ಯಕ್ಷರಾದ ಉದಯ ಶೆಟ್ಟಿ ಪಡುಮನೆ, ರಾಕೇಶ್ ಕುಂಜೂರು., ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸುಶೀನ್ ಶೆಟ್ಟಿ, ಮಹೇಶ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಕರುಣಾಕರ ದೇವಾಡಿಗ, ಸುದರ್ಶನ್ ಪೂಜಾರಿ, ದಿವಾಕರ ಶೆಟ್ಟಿ, ಪ್ರಕಾಶ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ, ಮುಂಬಯಿ ಸಮಿತಿ ಹಾಗೂ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸ್ಥಳವಂದಿಗರು ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.