ಕಾಪು: ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ, ರೈತ ಮೋರ್ಚಾ ಕಾಪು ಮಂಡಲ, ಮಜೂರು ಶಕ್ತಿ ಕೇಂದ್ರ ಹಾಗೂ 92ನೇ ಹೇರೂರು ಬೂತ್ ಸಮಿತಿ ವತಿಯಿಂದ 92ನೇ ಹೇರೂರು ಹಿಂದೂ ರುದ್ರಭೂಮಿ ಯಲ್ಲಿ ಆಯೋಜಿಸಲಾದ “ಸಸಿ ನೆಡುವ ಹಾಗೂ ಸಸಿ ವಿತರಣೆ ಕಾರ್ಯಕ್ರಮ”ದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಗಳಾದ ಯತೀಶ್ ಹೇರೂರು, ಕಾಪು ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಕೃಷ್ಣ ಮಜೂರು, ಶಿರ್ವ ಮಹಾ ಶಕ್ತಿ ಕೇಂದ್ರದ ಸಂದೀಪ್, ಹೇರೂರು ಶಕ್ತಿ ಕೇಂದ್ರದ ಪ್ರಸಾದ್ ಆಚಾರ್ಯ, ಬೂತ್ ಅಧ್ಯಕ್ಷರಾದ ಅಭಿಷೇಕ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಮಜೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವಳದೂರು, ಗಣೇಶ್ ಶೆಟ್ಟಿ ಹೇರೂರು, ಮಾಜಿ ಉಪಾಧ್ಯಕ್ಷರಾದ ಮಂಜುಳಾ ಹಾಗೂ ರೈತ ಮೋರ್ಚಾದ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


