ಪ್ರಣವಾನಂದ ಸ್ವಾಮೀಜಿಯವರನ್ನು ಭೇಟಿಯಾದ
ಸಚಿವ ಸುನೀಲ್

ಬೆಂಗಳೂರಿನ ಖಾಸಗಿ ಹೋಟೆಲಲ್ಲಿ ಪರಮಪೂಜ್ಯ ಡಾಕ್ಟರ್ ಪ್ರಣವಾನಂದ ಸ್ವಾಮೀಜಿಯವರನ್ನು ಕುಲಬಾಂಧವರು ಹಾಗೂ ರಾಜ್ಯದ ಇಂಧನ ಸಚಿವರು ಆಗಿರುವ ಶ್ರೀ ಸುನಿಲ್ ಕುಮಾರ್ ಅವರು ಭೇಟಿ ಮಾಡಿ ಕೇಂದ್ರ ಆರ್ಯ ಈಡಿಗ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುವ ಹೋರಾಟಗಳ ಬಗ್ಗೆ ಮತ್ತು ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚಿಸಿದರು. ಕೂಡಲೇ ಒಂದು ವಾರದ ಒಳಗೆ ಕೇಂದ್ರ ಹೋರಾಟ ಸಮಿತಿಯನ್ನು ಕರೆಸಿ ಮತ್ತು ರಾಜ್ಯದ ಅಬಕಾರಿ ಸಚಿವರಾದ ಶ್ರೀ ಗೋಪಾಲಯ್ಯ ಅವರನ್ನು ಕೂಡ ಕರೆಸಿ ಉತ್ತರ ಕರ್ನಾಟಕ ಭಾಗಕ್ಕೆ ಮಂಗಳೂರು ಉಡುಪಿ ಮಾದರಿಯಲ್ಲಿ ಕೂಡಲೇ ಸೇಂದಿ ಇಳಿಸುವ ನಿರ್ಣಯವನ್ನು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಲ್ಲಿ ಅಭಿವೃದ್ಧಿ ನಿಗಮ ಘೋಷಣೆ ಮಾಡುವ ಬಗ್ಗೆ ಸುಧೀರ್ಘವಾದ ಚರ್ಚೆಯನ್ನು ಮಾಡುವುದಕ್ಕೆ ಅಂತಿಮವಾದ ನಿರ್ಣಯ ತೆಗೆದುಕೊಳ್ಳಲಾಯಿತು ಸಮುದಾಯದ ಮಂತ್ರಿಗಳುಹಾಗೂ ಸಮಾಜದ ಎಲ್ಲಾ ಶಾಸಕರನ್ನು ಕರೆಸಿ ಕೂಡಲೇ ಒಂದು ಸಭೆಯನ್ನು ಮಾಡಿ ನಿರ್ಧರಿಸೋಣ ಎಂದು ಶ್ರೀ ಸುನಿಲ್ ಕುಮಾರ್ ಅವರು ಸ್ವಾಮೀಜಿಯವರಿಗೆ ತಿಳಿಸಿದರು. ಈ ಸಮಯದಲ್ಲಿ ಕುಲಬಾಂಧವರು ಹಾಗೂ ಭಟ್ಕಳ ಶಾಸಕರಾದ ಶ್ರೀ ಸುನಿಲ್ ನಾಯ್ಕ್ ಹಾಗೂ ಶಾಸಕರಾದ ಶ್ರೀ ಭರತ್ ಶೆಟ್ಟಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.