ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಯೋಗಿ ಮಿತ್ರ ಬೇಡಿರಾಂ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಯವರ ಮಿತ್ರ ಮತ್ತು ಬಿಜೆಪಿ ಮಿತ್ರ ಪಕ್ಷದ ಶಾಸಕ ಬೇಡಿರಾಂ ಪ್ರಶ್ನೆ ಪತ್ರಿಕೆ ಸೋರಿಕೆ ವ್ಯವಹಾರದ ವೀಡಿಯೋ ಜಾಲ ತಾಣದಲ್ಲಿ ಹರಿದಾಡುತ್ತಿದೆ.ಕೆಲವು ಯುವಕರು ಶಾಸಕ ಬೇಡಿರಾಂರಿಗೆ ಹಣ ಕೊಟ್ಟರೂ ಕೆಲಸ ಸಿಕ್ಕಿಲ್ಲ ಎಂದು ಜಾಲ ತಾಣದಲ್ಲಿ ಗೋಳು ತೋಡಿಕೊಂಡ ಮೇಲೆ ಬೇಡಿರಾಂ ಕರಾಮತ್ತು ಹೊರಬಿದ್ದಿದೆ.
ಕಳೆದ ವರುಷ ರೈಲ್ವೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬೇಡಿರಾಂ ಬಂಧನವಾಗಿತ್ತು. ಆದರೆ ದಿನದಲ್ಲೇ ಜಾಮೀನು ಪಡೆದು ಅವರು ಹೊರಗಿದ್ದಾರೆ. ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಜಕಾನಿಯಾ ಕ್ಷೇತ್ರದ ಶಾಸಕ ಈ ಬೇಡಿರಾಂ; ಬಿಜೆಪಿ ಮಿತ್ರ ಪಕ್ಷ ಎಸ್‌ಬಿಎಸ್‌ಪಿ ಶಾಸಕರು.ದೇಶದೆಲ್ಲೆಡೆ ನನಗೆ ಸಂಪರ್ಕ ಇದೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡಿಸಿ ಕೆಲಸ ಕೊಡಿಸುವ ವ್ಯವಹಾರ. ದೊಡ್ಡ ಡೀಲ್ ಇದ್ದರೆ ಮಾತ್ರ ಮಾತುಕತೆ ಎಂದು ಬೇಡಿರಾಂ ಹೇಳಿಕೆಯ ವೀಡಿಯೋ ಈಗ ವೈರಲ್ ಆಗಿದೆ.