ಭಾರತಕ್ಕೆ ರೈಲಿನಲ್ಲಿ ಕಲ್ಲಿದ್ದಲು ಕಳುಹಿಸಿದ ರಶಿಯಾ
ಐಎನ್‌ಎಸ್‌ಟಿಸಿ- ಅಂತರರಾಷ್ಟಿçÃಯ ಬಡಗಣ ತೆಂಕಣ ಸಾಗಣೆ ನೇರದಾರಿಯ ಮೂಲಕ ಇದೇ ಮೊದಲ ಬಾರಿಗೆ ರಶಿಯಾದ ಕಲ್ಲಿದ್ದಲು ಭಾರತಕ್ಕೆ ಬಂತು.ರಶಿಯಾದಿದ ನೇರ ಭಾರತಕ್ಕೆ ಇಂಟರ್‌ನ್ಯಾಶನಲ್ ನಾರ್ತ್ ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್ ರಚನೆಯನ್ನು ರಶಿಯಾ 2000ದಲ್ಲಿ ಆರಂಭಿಸಿತ್ತು.
ಆದರೆ ತಡವಾಗಿ ಆರಂಭವಾಗಿದೆ. ಇರಾನಿನ ಬಂದರ್ ಅಬ್ಬಾಸ್‌ವರೆಗೆ ರೈಲು ಹಾದಿ. ಅಲ್ಲಿಂದ ಹಡಗು. ಮುಂದಿನ ರೈಲು ಹಾದಿ ಆಲೋಚನೆಯಲ್ಲೇ ಇದೆ.ಈಗ ರಶಿಯಾವು ಕಜ್‌ಬಾಸ್‌ನಿಂದ ಎರಡು ರೈಲು ಭರ್ತಿ ಕಲ್ಲಿದ್ದಲನ್ನು ಬಂದರ್‌ಅಬ್ಬಾಸ್‌ಗೆ ಯಶಸ್ವಿಯಾಗಿ ಕಳುಹಿಸಿದೆ. ಅಲ್ಲಿಂದ ಹಡಗಿನಲ್ಲಿ ಹೊರಟ ಕಲ್ಲಿದ್ದಲು ಈಗ ಮುಂಬಯಿ ಸಮೀಪಿಸಿದೆ.