ಪುತ್ತೂರು: ಬಾಲವನದಲ್ಲಿ ಬಾಲರು” ಸಂಭ್ರಮದ ಮಕ್ಕಳ ದಿನಾಚರಣೆ -ನ.14 : ಡಾ.ಶಿವರಾಮ ಕಾರಂತ ಬಾಲವನದಲ್ಲಿ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುತ್ತೂರು ಡಾ.ಶಿವರಾಮ ಕಾರಂತ ಬಾಲವನ ಸಮಿತಿ ಹಾಗೂ ಪುತ್ತೂರು ಸಹಾಯಕ ಆಯುಕ್ತರ ಕಾರ್ಯಾಲಯದ ಜಂಟಿ ಆಶ್ರಯದಲ್ಲಿ “ಬಾಲವನದಲ್ಲಿ ಬಾಲರು” ಸಂಭ್ರಮದ ಮಕ್ಕಳ ದಿನಾಚರಣೆ ನ.14 ಸೋಮವಾರ ಬೆಳಗ್ಗೆ 9 ರಿಂದ ಪರ್ಲಡ್ಕ ಡಾ.ಶಿವರಾಮ ಕಾರಂತ ಬಾಲವನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ.ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿ, ಕಾರ್ಯಕ್ರಮವಾಗಿ ವಿಶೇಷವಾಗಿ ಮಕ್ಕಳ ಸಾಹಿತ್ಯ ಸಂಭ್ರಮ ಸಮ್ಮೇಳನ, 9 ವೇದಿಕೆಗಳಲ್ಲಿ ಏಕಕಾಲದಲ್ಲಿ ಸಾಹಿತ್ಯ, ಚಿತ್ರ, ಹಾಡು, ಕರಕುಶಲ, ನಾಟಕ, ಭಾಷಣ ಕುರಿತು ತರಬೇತಿ, ಸತತ ಐದು ಗಂಟೆಗಳ ಕಾಲ ಸಾಂಸ್ಕೃತಿಕ ಸಂತಸ, ಮಕ್ಕಳ ಚಿತ್ರಕಲೆ, ಕ್ರಾಫ್ಟ್, ಕಸದಿಂದ ರಸ ಪ್ರದರ್ಶನ, ವಿವಿಧ ಮನೋರಂಜನಾ ಆಟಗಳು, ಆಹಾರ ಮೇಳ ಸಹಿತ ವಿವಿಧ ಇಲಾಖೆಗಳ ಮಾಹಿತಿ ಮೇಳಗಳನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಾಲವನದ ಕಾರ್ಯಕ್ರಮ ಸಂಯೋಜಕ ಜಗನ್ನಾಥ ಅರಿಯಡ್ಕ ಉಪಸ್ಥಿತರಿದ್ದರು.

Related Posts

Leave a Reply

Your email address will not be published.