ವಿಟ್ಲ: ಪೆಟ್ರೋಲ್ ಸುರಿದು ಯುವಕನ ಹತ್ಯೆ

ವಿಟ್ಲ: ಪೆಟ್ರೋಲ್ ಸುರಿದು ಯುವಕನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ವ್ಯಕ್ತಿಯೋರ್ವನನ್ನು ವಿಟ್ಲ ಪೋಲೀಸರು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬಂಟ್ವಾಳ-ವಿಟ್ಲ ಠಾಣಾ ವ್ಯಾಪ್ತಿಯ ಗಡಿ ಭಾಗದ ಸುರಿಬೈಲು ನಿವಾಸಿ ಸಪ್ಪಿ (ಸಮಾದ್) (19) ಮೃತ ಯುವಕ. ಅದ್ರಾಮ ಸಲಿಂಗಕಾಮಿಯಾಗಿದ್ದು, ಮಂಚಿ-ಇರಾ-ಮುಡಿಪು ರಸ್ತೆಯ ನಿರ್ಜನ ಪ್ರದೇಶದ ಗುಡ್ಡದಲ್ಲಿ ಪೆಟ್ರೋಲ್ ಸುರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಂಟ್ವಾಳ ಮತ್ತು ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Related Posts

Leave a Reply

Your email address will not be published.