ಪುತ್ತೂರು : ಅ.27 ರಂದು ಚೆನ್ನಾವರ ಮುಹಿಯುದ್ದಿನ್ ಜುಮಾ ಮಸೀದಿಯ ಖಿದ್ಮತುಲ್ ಇಸ್ಮಾಂ ಜಮಾಅತ್ ಕಮಿಟಿಗೊಳಪಟ್ಟ ಸಿರಾಜುಲ್ ಉಲೂಂ ಮದ್ರಸದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ಪುತ್ತೂರು: ಸುಮಾರು ರೂ. 30ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಚೆನ್ನಾವರ ಮುಹಿಯುದ್ದಿನ್ ಜುಮಾ ಮಸೀದಿಯ ಖಿದ್ಮತುಲ್ ಇಸ್ಮಾಂ ಜಮಾಅತ್ ಕಮಿಟಿಗೊಳಪಟ್ಟ ಸಿರಾಜುಲ್ ಉಲೂಂ ಮದ್ರಸದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಅ. 27ರಂದು ನಡೆಯಲಿದೆ ಎಂದು ಮಸೀದಿ ಕಮಿಟಿ ಅಧ್ಯಕ್ಷ ಶಾಫಿ ಚೆನ್ನಾರ್ ತಿಳಿಸಿದ್ದಾರೆ.

ಅವರು ಮಂಗಳವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನೂತನ ಮದ್ರಸ ಕಟ್ಟಡವನ್ನು ಸಯ್ಯದ್ ಬರ‍್ರುಸ್ಸಾದಾತ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಳ್ ಕಡಲುಂಡಿ ಉದ್ಘಾಟಿಸಲಿದ್ದಾರೆ. ಸಯ್ಯದ್ ಶಮೀರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುಅ ನೆರವೇರಿಸಲಿದ್ದಾರೆ. ಸಯ್ಯದ್ ಹಾಮಿದ್ ತಂಙಳ್ ಮುಹಿಮ್ಮಾತ್ ಸಭಾ ವೇದಿಕೆ ಉದ್ಘಾಟಿಸಲಿದ್ದಾರೆ. ರಾಜ್ಯ ವಕ್ಫ್ ಬೋರ್ಡ್ ಅದ್ಯಕ್ಷ ನೂತನ ಕಾಮಗಾರಿಗೆ ಶಿಲನ್ಯಾಸ ನಡೆಸಲಿದ್ದಾರೆ. ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರ, ಸಯ್ಯದ್ ಕುಂಞÂಕೋಯ ತಂಙಳ್ ಸಅದಿ ಸುಳ್ಯ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆಶಿಕ್ ದಾರಿಮಿ ಆಲಪುಝ ಮತ್ತು ಪೇರೋಡ್ ಮಹಮ್ಮದ್ ಅಝ್ಹರಿ ಮುಖ್ಯ ಪ್ರಭಾಷಣ ನೀಡಲಿದ್ದಾರೆ.
ಅದೇ ದಿನ ಬೆಳಗ್ಗೆ ವಿದ್ಯಾರ್ಥಿಗಳ ಮತ್ತು ಪೂರ್ವ ಉಪನ್ಯಾಸಕರ ಕೂಡುವಿಕೆಯಲ್ಲಿ `ಗುರು ಶಿಷ್ಯ ಸಂಗಮ’ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಮಾಅತ್ ಕಮಿಟಿ ಉಪಾಧ್ಯಕ್ಷ ಹನೀಫ್ ಕುಂಡಡ್ಕ, ಕಾರ್ಯದರ್ಶಿ ಇಸ್ಮಾಯಿಲ್ ಕಾನಾವು, ಸದಸ್ಯ ಅಬ್ದುಲ್ ರಹಿಮಾನ್ ಪಾಲ್ತಾಡಿ ಮತ್ತು ಮದ್ರಸ ಕಟ್ಟಡ ನಿರ್ಮಾಣ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಉಪಸ್ಥಿತರಿದ್ದರು.
